ನವದೆಹಲಿ: ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ದೇಶದ ಸರಕು ಸಾಗಣೆ ವಲಯಕ್ಕೆ ಸಂಬಂಧಿಸಿದಂತೆ ಬಿಡುಗಡೆಗೊಳಿಸಿರುವ 13 ಸಾಧಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯಲ್ಲಿ ಕರ್ನಾಟಕ ಕೂಡ ಸ್ಥಾನ ಪಡೆದಿದೆ.

ಸಚಿವಾಲಯವು ಸರಕು ಸಾಗಣೆ ಸಾಧನೆ ಸೂಚ್ಯಂಕ–2024 ಅನ್ನು ಬಿಡುಗಡೆ ಮಾಡಿದೆ. ಈ ಸೂಚ್ಯಂಕವು ದೇಶದ ವ್ಯಾಪಾರ ರಫ್ತು ಹಾಗೂ ಆರ್ಥಿಕ ಬೆಳವಣಿಗೆಗೆ ಒತ್ತು ನೀಡಲು ಅಗತ್ಯವಾದ ಸರಕು ಸಾಗಣೆ ಸೇವೆಯ ಸೂಚಕವಾಗಿದೆ.

ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯು (ಡಿಪಿಐಐಟಿ) ಈ ವರದಿ ಸಿದ್ಧಪಡಿಸಿದೆ. 2023ರಲ್ಲಿಯೂ ಈ ಪಟ್ಟಿ ಬಿಡುಗಡೆ ಮಾಡಲಾಗಿತ್ತು.

ಸರಕು ಸಾಗಣೆ ಸೇವಾ ಜಾಲದಲ್ಲಿ ಎದುರಾದ ಸಮಸ್ಯೆಗಳು ಹಾಗೂ ಆಯಾ ರಾಜ್ಯಗಳಲ್ಲಿನ ಸರಕು ಸಾಗಣೆ ವ್ಯವಸ್ಥೆಯನ್ನು ಮಾನದಂಡವಾಗಿಟ್ಟುಕೊಂಡು ಈ ವರದಿ ಸಿದ್ಧಪಡಿಸಲಾಗಿದೆ.

2023ರಲ್ಲಿ ವೇಗವಾಗಿ ಬೆಳವಣಿಗೆ ಸಾಧಿಸುತ್ತಿರುವ ಮತ್ತು ಆಕಾಂಕ್ಷಿ ಪಟ್ಟಿಯಲ್ಲಿದ್ದ ಮಹಾರಾಷ್ಟ್ರ, ಒಡಿಶಾ, ಉತ್ತರಾಖಂಡ, ಅರುಣಾಚಲ ಪ್ರದೇಶದಲ್ಲಿ ಸರಕು ಸಾಗಣೆ ವ್ಯವಸ್ಥೆ ಸುಧಾರಣೆ ಕಂಡಿದ್ದು ‘ಸಾಧಕ’ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಪಂಜಾಬ್ ಒಂದು ಸ್ಥಾನ ಕಳೆಗಿಳಿದಿದ್ದು, ವೇಗವಾಗಿ ಬೆಳವಣಿಗೆ ಸಾಧಿಸುತ್ತಿರುವ ಪಟ್ಟಿಗೆ ಸೇರ್ಪಡೆಗೊಂಡಿದೆ.

ಸರಕು ಸಾಗಣೆಗೆ ಸಂಬಂಧಿಸಿದ ಮೂಲಸೌಕರ್ಯ, ಸೇವೆ, ಕಾರ್ಯಾಚರಣೆ, ನಿಯಂತ್ರಣ ವ್ಯವಸ್ಥೆ ಹಾಗೂ ಸುಸ್ಥಿರ ಸಾಗಣೆ ಆಧಾರದ ಮೇಲೆ ಈ ವರದಿ ಸಿದ್ಧಪಡಿಸಲಾಗಿದೆ.

‘ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಈ ಸೂಚ್ಯಂಕದ ಅಡಿ ಸೇರ್ಪಡೆಗೊಳಿಸುವುದಕ್ಕೆ ಸಂಬಂಧಿಸಿದಂತೆ ನಿಯಮಾವಳಿಗಳನ್ನು ಮತ್ತಷ್ಟು ಬಿಗಿಗೊಳಿಸಲು ಡಿಪಿಐಐಟಿ ಮುಂದಾಗಬೇಕು’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಸೂಚಿಸಿದ್ದಾರೆ.

ಸರಕು ಸಾಗಣೆ ವಲಯದಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮವಹಿಸಲು ಸಚಿವಾಲಯ ನಿರ್ಧರಿಸಿದೆ ಎಂದು ಹೇಳಿದ್ದಾರೆ.

ಸಾಧಕ ಪಟ್ಟಿ: ಗುಜರಾತ್ ಕರ್ನಾಟಕ ಮಹಾರಾಷ್ಟ್ರ ಒಡಿಶಾ ತಮಿಳುನಾಡು ದೆಹಲಿ ಚಂಡೀಗಢ ಹರಿಯಾಣ ತೆಲಂಗಾಣ ಉತ್ತರ ಪ್ರದೇಶ ಉತ್ತರಾಖಂಡ ಅಸ್ಸಾಂ ಮತ್ತು ಅರುಣಾಚಲ ಪ್ರದೇಶ ವೇಗವಾಗಿ ಬೆಳವಣಿಗೆ ಸಾಧನೆ ಪಟ್ಟಿ: ಆಂಧ್ರಪ್ರದೇಶ ಗೋವಾ ಬಿಹಾರ ಹಿಮಾಚಲ ಪ್ರದೇಶ ಪಂಜಾಬ್ ರಾಜಸ್ಥಾನ ಮೇಘಾಲಯ ಮಿಜೋರಾಂ ನಾಗಾಲ್ಯಾಂಡ್ ಸಿಕ್ಕಿಂ ತ್ರಿಪುರಾ ದಾದ್ರಾ ಮತ್ತು ನಗರ್ ಹವೇಲಿ ದಮನ್ ಮತ್ತು ಡಿಯು ಜಮ್ಮು ಮತ್ತು ಕಾಶ್ಮೀರ ಲಕ್ಷದ್ವೀಪ ಪುದುಚೇರಿ ಆಕಾಂಕ್ಷಿ ಪಟ್ಟಿ: ಕೇರಳ ಪಶ್ಚಿಮ ಬಂಗಾಳ ಛತ್ತೀಸಗಢ ಜಾರ್ಖಂಡ್ ಅಂಡಮಾನ್ ಮತ್ತು ನಿಕೋಬಾರ್ ಲಡಾಖ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.