ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲ್ಯಾಟ್‌ ಮಾಲೀಕರಿಗೆ ಶೇ 18ರಷ್ಟು ಜಿಎಸ್‌ಟಿ

Last Updated 22 ಜುಲೈ 2019, 19:35 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರು, ನಿವಾಸಿಗಳ ಕ್ಷೇಮಾಭಿದ್ಧಿ ಸಂಘಕ್ಕೆ (ಆರ್‌ಡಬ್ಲ್ಯುಎ) ₹ 7,500ಕ್ಕಿಂತ ಹೆಚ್ಚಿನ ಮೊತ್ತದ ತಿಂಗಳ ನಿರ್ವಹಣಾ ಶುಲ್ಕ ಪಾವತಿಸುತ್ತಿದ್ದರೆ ಶೇ 18ರಷ್ಟು ಜಿಎಸ್‌ಟಿ ಪಾವತಿಸಬೇಕಾಗುತ್ತದೆ.

ಕ್ಷೇಮಾಭಿವೃದ್ಧಿ ಸಂಘಗಳ ಸರಕು ಮತ್ತು ಸೇವೆಗಳ ವಾರ್ಷಿಕ ವಹಿವಾಟು ₹ 20 ಲಕ್ಷ ಮೀರಿದ್ದರೆ ಮತ್ತು ತನ್ನ ಪ್ರತಿಯೊಬ್ಬ ಸದಸ್ಯರಿಂದ ಪ್ರತಿ ತಿಂಗಳೂ ನಿರ್ವಹಣಾ ಶುಲ್ಕದ ರೂಪದಲ್ಲಿ ₹ 7,500ಕ್ಕಿಂತ ಹೆಚ್ಚಿನ ಮೊತ್ತ ವಸೂಲಿ ಮಾಡುತ್ತಿದ್ದರೆ ಶೇ 18ರಷ್ಟು ಜಿಎಸ್‌ಟಿ ಸಂಗ್ರಹಿಸಬೇಕು ಎಂದು ಹಣಕಾಸು ಸಚಿವಾಲಯವು ಸೋಮವಾರ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಪ್ರತಿಯೊಬ್ಬ ಸದಸ್ಯರಿಂದ ಸಂಗ್ರಹಿಸುವ ನಿರ್ವಹಣಾ ಶುಲ್ಕವು ₹ 7,500 ಮೀರದಿದ್ದರೆ ಮಾತ್ರ ಜಿಎಸ್‌ಟಿಯಿಂದ ವಿನಾಯ್ತಿ ಸಿಗಲಿದೆ ಎಂದು ಸ್ಪಷ್ಟಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT