ಶನಿವಾರ, ಅಕ್ಟೋಬರ್ 19, 2019
27 °C

ಬ್ಯಾಂಕ್‌ ಗ್ರಾಹಕರ ಗಮನಕ್ಕೆ: ಸೆ.26ರಿಂದ ಬ್ಯಾಂಕ್‌ಗಳಿಗೆ ಸತತ 4 ದಿನಗಳ ರಜೆ

Published:
Updated:

ಬೆಂಗಳೂರು: ಸೆ.26ರಿಂದ ಸತತ ನಾಲ್ಕು ದಿನ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ. ನಿಮಗೆ ಕೈಗಾವಲಿಗೆ ಬೇಕಿರುವಷ್ಟು ಹಣವನ್ನು ಈಗಲೇ ಡ್ರಾ ಮಾಡಿಟ್ಟುಕೊಳ್ಳುವುದು ಜಾಣತನ.

ಸಾರ್ವಜನಿಕ ವಲಯದ 10 ಬ್ಯಾಂಕ್‌ಗಳ ವಿಲೀನ ವಿರೋಧಿಸಿ ಬ್ಯಾಂಕ್ ನೌಕರರ ನಾಲ್ಕು ಯೂನಿಯನ್‌ಗಳು ಸೆ.26 ಮತ್ತು 27ರಂದು ಮುಷ್ಕರಕ್ಕೆ ಕರೆ ನೀಡಿವೆ. 

ಈ ಎರಡು ದಿನಗಳ ಮುಷ್ಕರದ ಬೆನ್ನಿಗೇ ನಾಲ್ಕನೇ ಶನಿವಾರ ಮತ್ತು ಭಾನುವಾರದ ರಜೆ ಬರಲಿದೆ. ಸೆ.30ರಂದು ಬ್ಯಾಂಕ್‌ಗಳ ಅರ್ಧವಾರ್ಷಿಕ ಲೆಕ್ಕ ಚುಕ್ತಾ ದಿನ.  ಈ ದಿನ ಬ್ಯಾಂಕ್ ಕಾರ್ಯ ನಿರ್ವಹಿಸಲಿದೆ.

ಚೆಕ್‌ಗಳ ತೀರುವಳಿ, ಹಣ ಸಂದಾಯ, ಹಣ ಹಿಂಪಡೆಯುವುದು, ಡಿಡಿ ವ್ಯವಹಾರ ಸೇರಿದಂತೆ ಹಲವು ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಕಂಡುಬರಲಿದೆ. ಬ್ಯಾಂಕ್‌ಗಳ ಎಟಿಎಂಗಳಲ್ಲೂ ಹಣ ಸಿಗುವುದು ಕಷ್ಟ.

ಹೀಗಾಗಿ ನಿಮ್ಮ ಹಣಕಾಸಿನ ಅಗತ್ಯಗಳನ್ನು ಮೊದಲೇ ಪ್ಲಾನ್ ಮಾಡಿಕೊಂಡು, ಕೈಗಾವಲಿಗೆ ಬೇಕಿರುವಷ್ಟು ಹಣವನ್ನು ಡ್ರಾ ಮಾಡಿಕೊಳ್ಳುವುದು ಒಳಿತು.

Post Comments (+)