ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿಮೆ ಬಡ್ಡಿ ದರಕ್ಕೆ ತ್ವರಿತ ಗೃಹ ಸಾಲ

59 ನಿಮಿಷದಲ್ಲಿ ಸಾಲಕ್ಕೆ ಅನುಮೋದನೆ ನೀಡಲು ಕ್ರಮ
Last Updated 20 ಆಗಸ್ಟ್ 2019, 20:25 IST
ಅಕ್ಷರ ಗಾತ್ರ

ನವದೆಹಲಿ: ಮಂದಗತಿಯ ಆರ್ಥಿಕತೆಗೆ ಚೇತರಿಕೆ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ, ಗೃಹ, ವಾಹನ, ಶಿಕ್ಷಣ ಮತ್ತು ವೈಯಕ್ತಿಕ ಸಾಲಗಳನ್ನು ಕಡಿಮೆ ಬಡ್ಡಿ ದರಕ್ಕೆ ತ್ವರಿತವಾಗಿ ನೀಡಲು ಬ್ಯಾಂಕ್‌ಗಳಿಗೆ ಸೂಚಿಸಿದೆ.

ರಿಟೇಲ್‌ ಸಾಲದ ವಹಿವಾಟನ್ನು ವಿಸ್ತರಿಸಲು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಒಂದು ಗಂಟೆಗಿಂತ ಕಡಿಮೆ ಅವಧಿಯಲ್ಲಿ ಸಾಲಕ್ಕೆ ಅನುಮೋದನೆ ನೀಡುವ ಅಂತರ್ಜಾಲ ತಾಣದ ಸೌಲಭ್ಯವನ್ನು ಬಳಸಿಕೊಳ್ಳಲು ಮುಂದಾಗಿವೆ.

ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ₹ 1 ಕೋಟಿವರೆಗಿನ ಸಾಲವನ್ನು ಒಂದು ಗಂಟೆಯ ಅವಧಿ ಒಳಗೆ ಮಂಜೂರು ಮಾಡಲು ಕಳೆದ ವರ್ಷ ಆರಂಭಿಸಿದ್ದ psbloansin59minutes ಅಂತರ್ಜಾಲ ತಾಣವನ್ನು ಗೃಹ, ವಾಹನ ಮತ್ತಿತರ ಸಾಲ ಮಂಜೂರಾತಿಗೂ ಬಳಸಿಕೊಳ್ಳಲು ಬ್ಯಾಂಕ್‌ಗಳು ಮುಂದಾಗಿವೆ. ಈ ಇಂಟರ್‌ನೆಟ್‌ ತಾಣದಲ್ಲಿ ರಿಟೇಲ್‌ ಸಾಲಗಳಿಗೆ ಒಂದು ಗಂಟೆಯ ಅವಧಿಯೊಳಗೆ ತಾತ್ವಿಕ ಅನುಮೋದನೆ ನೀಡಲು ಸಾಧ್ಯವಾಗಲಿದೆ. ಈ ಸೌಲಭ್ಯದಡಿ ಸಾಲ ಮಂಜೂರಾತಿಯ ಗರಿಷ್ಠ ಮಿತಿಯನ್ನು ₹ 5 ಕೋಟಿಗೆ ವಿಸ್ತರಿಸಲೂ ಕೆಲ ಬ್ಯಾಂಕ್‌ಗಳು ನಿರ್ಧರಿಸಿವೆ.

ಒಬಿಸಿ ಕೊಡುಗೆ: ಸರ್ಕಾರಿ ಸ್ವಾಮ್ಯದ ಒರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌, ರೆಪೊ ದರ ಆಧರಿಸಿದ ಶೇ 8.35 ಮತ್ತು ಶೇ 8.75ರಿಂದ ಆರಂಭವಾಗುವ ಗೃಹ ಮತ್ತು ವಾಹನ ಸಾಲಗಳನ್ನು ಪರಿಚಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT