ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಪರಿಣಾಮವಾಗಿ ದೇಶದಲ್ಲಿ ಇಂಧನ ಬಿಕ್ಕಟ್ಟು ಎದುರಾಗುವ ಸಾಧ್ಯತೆ ಇದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಅಭಾವ ಸೃಷ್ಟಿಯಾಗಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಏತನ್ಮಧ್ಯೆ, ಇಂಧನ ಸಚಿವಾಲಯವು ಈ ಕುರಿತು ಸ್ಪಷ್ಟನೆ ನೀಡಿದೆ.

ಎಲ್ಪಿಜಿ ಸಿಲಿಂಡರ್ ಕೊರತೆಯಾಗಲಿದೆ ಎನ್ನುವ ಬಗ್ಗೆ ಜನರು ಆತಂಕಪಡುವ ಅಗತ್ಯವಿಲ್ಲ. ಕೆಲವೇ ದಿನಗಳಲ್ಲಿ ವಿತರಣಾ ವ್ಯವಸ್ಥೆಯು ಯಥಾಸ್ಥಿತಿಗೆ ಬರಲಿದೆ. ದೇಶದ ಕಚ್ಚಾ ತೈಲ ಸರಬರಾಜು ಸುಸ್ಥಿತಿಯಲ್ಲಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ತೈಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ತಿಳಿಸಿದ್ದಾರೆ.

'ಆತಂಕದಿಂದ ಹೆಚ್ಚುವರಿ ಬುಕ್ಕಿಂಗ್'
ಮಾಧ್ಯಮದವರೊಂದಿಗೆ ಮಾತನಾಡಿರುವ ಶರ್ಮಾ, 'ಬೇಡಿಕೆ ಇರುವ ಎಲ್ಪಿಜಿ ಪೈಕಿ ಶೇ 60 ರಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಅದರಲ್ಲಿ ಶೇ 90ರಷ್ಟು ಹೊರ್ಮುಜ್ ಜಲಸಂಧಿ ಮಾರ್ಗದಲ್ಲೇ ಬರುತ್ತದೆ. ಸದ್ಯ ಸಂದಿಗ್ಧ ಪರಿಸ್ಥಿತಿ ಇದ್ದರೂ, ದೇಶದ ಗ್ರಾಹಕರಿಗೆ ಪೂರೈಕೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ' ಎಂದು ಹೇಳಿದ್ದಾರೆ.

ಹಾಗೆಯೇ, 'ನಿತ್ಯ ಸುಮಾರು 50 ಲಕ್ಷ ಸಿಲಿಂಡರ್ಗಳನ್ನು ವಿತರಿಸುತ್ತಿದ್ದೇವೆ. ವಿತರಣಾ ವ್ಯವಸ್ಥೆಯಲ್ಲಿ ಯಾವುದೇ ವ್ಯತ್ಯಯದ ವರದಿಯಾಗಿಲ್ಲ. ಆದರೆ, ಆತಂಕಕ್ಕೊಳಗಾಗಿರುವ ಜನರು ಹೆಚ್ಚುವರಿ ಸಿಲಿಂಡರ್ಗಳನ್ನು ಬುಕ್ ಮಾಡುತ್ತಿದ್ದಾರೆ. ಇದರ ಪ್ರಮಾಣವು ಸಾಧಾರಣಕ್ಕಿಂತ ಹಲವು ಪಟ್ಟು ಹೆಚ್ಚಾಗಿದೆ. ಹಾಗಾಗಿ, ಭಯದಿಂದ ಬುಕ್ಕಿಂಗ್ ಮಾಡುವುದನ್ನು ನಿಲ್ಲಿಸುವಂತೆ ಜನರಲ್ಲಿ ಮನವಿ ಮಾಡುತ್ತೇವೆ' ಎಂದಿದ್ದಾರೆ.

ಮುಂದುವರಿದು, 'ಏಕಾಏಕಿ ಬುಕಿಂಗ್ ಪ್ರಮಾಣದಲ್ಲಿ ಏರಿಕೆಯಾಗಿರುವುದರಿಂದ ಆಗುವ ತೊಂದರೆಯನ್ನು ತಪ್ಪಿಸಲು, ಗೃಹ ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್ ಫಲಾನುಭವಿಗಳ ಪಟ್ಟಿ ಮಾಡುವಂತೆ ರಾಜ್ಯ ಸರ್ಕಾರಗಳಿಗೆ ತಿಳಿಸಲಾಗಿದೆ. ಇದರಿಂದ, ಆದ್ಯತೆಯ ಅನುಸಾರ ಸಿಲಿಂಡರ್ ವಿತರಿಸಲು ಸಾಧ್ಯವಾಗಲಿದೆ' ಎಂದು ತಿಳಿಸಿದ್ದಾರೆ.

'ಕಚ್ಚಾ ತೈಲ ಪೂರೈಕೆ ವ್ಯವಸ್ಥೆ ಸುಸ್ಥಿತಿಯಲ್ಲಿದೆ'
'ಭಾರತದ ಕಚ್ಚಾ ತೈಲ ಪೂರೈಕೆ ವ್ಯವಸ್ಥೆ ಸುರಕ್ಷಿತ, ಸುಸ್ಥಿತಿಯಲ್ಲಿದೆ. ದೇಶದಲ್ಲಿ ನಿತ್ಯವು 55 ಲಕ್ಷ ಬ್ಯಾರಲ್ನಷ್ಟು ತೈಲ ಬಳಕೆಯಾಗುತ್ತಿದೆ. ಸದ್ಯದ ಅವಧಿಯಲ್ಲಿ ವಿವಿಧ ಮೂಲಗಳಿಂದ ಸಂಗ್ರಹಿಸುತ್ತಿರುವ ತೈಲದ ಪ್ರಮಾಣವು, ಸಾಮಾನ್ಯವಾಗಿ ಹೊರ್ಮುಜ್ ಮಾರ್ಗವಾಗಿ ಬರುತ್ತಿದ್ದ ಪ್ರಮಾಣಕ್ಕಿಂತಲೂ ಹೆಚ್ಚಾಗಿದೆ' ಎಂದು ಮಾಹಿತಿ ನೀಡಿದ್ದಾರೆ.

ಭಾರತವು ಸುಮಾರು 40 ರಾಷ್ಟ್ರಗಳಿಂದ ಕಚ್ಚಾ ತೈಲ ಸರಬರಾಜು ಮಾಡಿಕೊಳ್ಳುತ್ತಿದೆ.

ತೈಲ ಕಂಪನಿಗಳು ವಿವಿಧ ಮೂಲಗಳಿಂದ ಕಚ್ಚಾ ಸರಕುಗಳನ್ನು ಆಮದು ಮಾಡಿಕೊಳ್ಳುತ್ತಿವೆ. ಬೇರೆ ಬೇರೆ ಆಯ್ಕೆಗಳನ್ನು ಬಳಸುತ್ತಿರುವುದರ ಪರಿಣಾಮವಾಗಿ, ದೇಶದ ಸುಮಾರು ಶೇ 70 ರಷ್ಟು ಕಚ್ಚಾ ತೈಲದ ಆಮದು ಹೊರ್ಮುಜ್ ಜಲಸಂಧಿ ಹೊರತುಪಡಿಸಿದ ಮಾರ್ಗಗಳಿಂದ ಬರುತ್ತಿದೆ. ಇದಕ್ಕೂ ಮೊದಲು ಶೇ 55ರಷ್ಟು ಮಾತ್ರವೇ ಈ ರೀತಿ ಆಮದಾಗುತ್ತಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

'ನಾನು ನಿಮ್ಮೊಂದಿಗೆ ಮಾತನಾಡುತ್ತಿರುವ ಈ ಹೊತ್ತಿನಲ್ಲಿ, ನೈಸರ್ಗಿಕ ಅನಿಲವನ್ನು ಹೊತ್ತ ಎರಡು ಸರಕು ಸಾಗಣೆ ಹಡಗುಗಳು ಭಾರತದತ್ತ ಹೊರಟಿವೆ. ಕೆಲವೇ ದಿನಗಳಲ್ಲಿ ಭಾರತ ತಲುಪಲಿವೆ. ಇದು, ದೇಶದಲ್ಲಿ ಕಚ್ಚಾ ತೈಲ ಪೂರೈಕೆ ವ್ಯವಸ್ಥೆಯನ್ನು ಇನ್ನಷ್ಟು ಸದೃಢಗೊಳಿಸಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.