ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

90 ಸ್ಪೈಸ್‌ಜೆಟ್ ಪೈಲಟ್‌ಗಳ ಮೇಲೆ ಡಿಜಿಸಿಎ ನಿರ್ಬಂಧ

Last Updated 13 ಏಪ್ರಿಲ್ 2022, 7:53 IST
ಅಕ್ಷರ ಗಾತ್ರ

ನವದೆಹಲಿ: ಸ್ಪೈಸ್‌ಜೆಟ್‌ ವಿಮಾನಯಾನ ಸಂಸ್ಥೆಯ 90 ಪೈಲಟ್‌ಗಳಿಗೆಬೋಯಿಂಗ್ 737 ಮ್ಯಾಕ್ಸ್ ವಿಮಾನ ಚಲಾಯಿಸದಂತೆ ನಾಗರಿಕ ವಿಮಾನಯಾನ ನಿರ್ದೇಶಾಲಯದ (ಡಿಜಿಸಿಎ) ನಿರ್ಬಂಧ ವಿದಿಸಿದೆ.

ಈ ವಿಮಾನಯಾನ ಸಂಸ್ಥೆಯ90 ಪೈಲಟ್‌ಗಳ ಮೇಲೆ ಮ್ಯಾಕ್ಸ್‌ ವಿಮಾನ ಹಾರಿಸುವುದನ್ನು ನಿರ್ಬಂಧಿಸಿದ್ದೇವೆ. ಈ ಪೈಲಟ್‌ಗಳು ಮ್ಯಾಕ್ಸ್‌ ವಿಮಾನಗಳನ್ನು ಹಾರಿಸಲು ಸೂಕ್ತ ತರಬೇತಿ ಪಡೆಯದೇ ಇರುವುದರಿಂದ ಈ ಕ್ರಮಕೈಗೊಳ್ಳಲಾಗಿದೆ ಎಂದುಡಿಜಿಸಿಎ ಮುಖ್ಯಸ್ಥ ಅರುಣ್ ಕುಮಾರ್ ಹೇಳಿದ್ದಾರೆ.

ನಿರ್ಬಂಧಕ್ಕೆ ಒಳಗಾಗಿರುವ ಪೈಲಟ್‌ಗಳು ಬೋಯಿಂಗ್‌ ಮ್ಯಾಕ್ಸ್‌ ವಿಭಾಗದಲ್ಲಿ ಸಮರ್ಪಕ ತರಬೇತಿ ಪಡೆದು ಯಶಸ್ವಿಯಾದರೆ ಅವರ ಮೇಲಿನ ನಿರ್ಬಂಧವನ್ನು ತೆರವು ಮಾಡಲಾಗುವುದು ಎಂದು ಅರುಣ್‌ ಕುಮಾರ್‌ ಹೇಳಿದ್ದಾರೆ.

2019ರಿಂದ ಬೋಯಿಂಗ್ ಮ್ಯಾಕ್ಸ್ ವಿಮಾನಗಳ ಹಾರಾಟ ವಿಭಾಗದಲ್ಲಿ ಸಮರ್ಪಕವಾಗಿ ತರಬೇತಿ ಪಡೆದವರಿಗೆ ವಿಮಾನ ಚಲಾಯಿಸಲುಭಾರತೀಯ ನಾಗರಿಕ ವಿಮಾನಯಾನ ನಿರ್ದೇಶನಾಲಯ ಅವಕಾಶ ಕಲ್ಪಿಸಿದೆ. ಇದೇ ವರ್ಷ ಇಥೋಪಿಯನ್ ಏರ್‌ಲೈನ್ಸ್ 737 ಮ್ಯಾಕ್ಸ್ ವಿಮಾನವು ಅಪಘಾತಕ್ಕೀಡಾಗಿ, ನಾಲ್ವರು ಭಾರತೀಯರು ಸೇರಿದಂತೆ 157 ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT