ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 1ರಷ್ಟು ಜಿಎಸ್‌ಟಿ ನಗದು ಪಾವತಿ ವ್ಯಾಪ್ತಿಗೆ 45 ಸಾವಿರ ಕಂಪನಿಗಳು

Last Updated 26 ಡಿಸೆಂಬರ್ 2020, 15:53 IST
ಅಕ್ಷರ ಗಾತ್ರ

ನವದೆಹಲಿ: ತಿಂಗಳಿಗೆ ₹ 50 ಲಕ್ಷಕ್ಕಿಂತ ಅಧಿಕ ವಹಿವಾಟು ನಡೆಸುವ ಕಂಪನಿಗಳು ಜನವರಿ 1 ರಿಂದ ಕಡ್ಡಾಯವಾಗಿ ಶೇ 1ರಷ್ಟು ಜಿಎಸ್‌ಟಿಯನ್ನು ನಗದು ರೂಪದಲ್ಲಿ ಪಾವತಿಸಬೇಕು. 45 ಸಾವಿರ ಕಂಪನಿಗಳು ಈ ನಿಯಮದ ವ್ಯಾಪ್ತಿಗೆ ಬರಲಿವೆ ಎಂದು ರೆವಿನ್ಯು ಇಲಾಖೆಯ ಮೂಲಗಳು ತಿಳಿಸಿವೆ.

ಜಿಎಸ್‌ಟಿಯಲ್ಲಿ ನೋಂದಾಣಿ ಆಗಿರುವ ಒಟ್ಟಾರೆ ತೆರಿಗೆದಾರರ ಸಂಖ್ಯೆ 1.1 ಕೋಟಿ ಇದೆ. ಹೊಸ ನಿಯಮದ ಪ್ರಕಾರ ಶೇ 1ರಷ್ಟು ಜಿಎಸ್‌ಟಿಯನ್ನು ನಗದು ರೂಪದಲ್ಲಿ ಪಾವತಿಸಲಿರುವವರ ಪ್ರಮಾಣ ‌ಶೇ 0.37ರಷ್ಟಾಗಲಿದೆ.

ನಕಲಿ ಇನ್‌ವಾಯ್ಸ್‌ ಸೃಷ್ಟಿಸುವ ಮೂಲಕ ತೆರಿಗೆ ವಂಚಿಸುವುದನ್ನು ತಪ್ಪಿಸಲು ಈ ನಿಯಮ ರೂಪಿಸಲಾಗಿದೆ. ಇದರಿಂದಾಗಿ ಜಿಎಸ್‌ಟಿ ಪಾವತಿಸಲು ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ (ಐಟಿಸಿ) ಬಳಕೆಯು ಶೇ 99ಕ್ಕೆ ಮಿತಿಗೊಂಡಿದೆ. ಆದರೆ, ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅಥವಾ ಪಾಲುದಾರ ₹ 1 ಲಕ್ಷಕ್ಕಿಂತ ಅಧಿಕ ಆದಾಯ ತೆರಿಗೆ ಪಾವತಿಸಿದಲ್ಲಿ ಅಥವಾ ₹ 1 ಲಕ್ಷಕ್ಕಿಂತ ಹೆಚ್ಚಿನ ತೆರಿಗೆ ಮರುಪಾವತಿ ಪಡೆದಲ್ಲಿ ಅಂತಹವರಿಗೆ ಹೊಸ ನಿಯಮ ಅನ್ವಯಿಸುವುದಿಲ್ಲ.

ಇನ್‌ಪುಟ್‌ ಟ್ಯಾಕ್ಸ್ ಕ್ರೆಡಿಟ್‌ ವಂಚನೆಗೆ ಸಂಬಂಧಿಸಿದಂತೆ ಸಿಬಿಐಸಿ ಇದುವರೆಗೆ 12 ಸಾವಿರ ಪ್ರಕರಣಗಳನ್ನು ದಾಖಲಿಸಿದ್ದು, 365 ಜನರನ್ನು ಬಂಧಿಸಿದೆ. ಕಳೆದ ಆರು ವಾರಗಳಲ್ಲಿಯೇ 165ಕ್ಕೂ ಅಧಿಕ ವಂಚಕರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT