ಶುಕ್ರವಾರ, ಸೆಪ್ಟೆಂಬರ್ 24, 2021
21 °C

‘620 ವೈದ್ಯಕೀಯ ಉಪಕರಣಗಳ ಬೆಲೆ ಇಳಿಕೆ’

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪಲ್ಸ್ ಆಕ್ಸಿಮೀಟರ್‌, ರಕ್ತದೊತ್ತಡ ಪರೀಕ್ಷಕ ಸೇರಿದಂತೆ 620ಕ್ಕೂ ಹೆಚ್ಚಿನ ವೈದ್ಯಕೀಯ ಉಪಕರಣಗಳ ಬೆಲೆಯಲ್ಲಿಇಳಿಕೆ ಆಗಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಶನಿವಾರ ತಿಳಿಸಿದೆ.

ಜುಲೈ 20ರಿಂದ ಅನ್ವಯ ಆಗುವಂತೆ ಆಕ್ಸಿಮೀಟರ್, ಗ್ಲೂಕೊಮೀಟರ್, ರಕ್ತದೊತ್ತಡ ಪರೀಕ್ಷಕ, ನೆಬ್ಯುಲೈಸರ್ ಮತ್ತು ಡಿಜಿಟಲ್ ಥರ್ಮೋಮೀಟರ್‌ಗಳ ತಯಾರಿಕಾ ವೆಚ್ಚ ಮತ್ತು ಮಾರಾಟದ ನಡುವಿನ ವ್ಯತ್ಯಾಸವು ಶೇ 70ಕ್ಕಿಂತ ಜಾಸ್ತಿ ಆಗುವಂತಿಲ್ಲ ಎಂದು ರಾಷ್ಟ್ರೀಯ ವೈದ್ಯಕೀಯ ಮತ್ತು ಔಷಧೀಯ ವಸ್ತುಗಳ ಬೆಲೆ ನಿಗದಿ ಆಯೋಗವು (ಎನ್‌ಪಿಪಿಎ)  ನಿರ್ಬಂಧ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಕಂಪನಿಗಳು ಬೆಲೆಯಲ್ಲಿ ಇಳಿಕೆ ಮಾಡಿವೆ.

ಜುಲೈ 23, 2021ರಂತೆ, ಒಟ್ಟಾರೆ 684 ಉಪಕರಣಗಳಿದ್ದು ಅವುಗಳಲ್ಲಿ 620 (ಶೇ 91) ಉಪಕರಣಗಳ ‘ಎಂಆರ್‌ಪಿ’ಯಲ್ಲಿ ಇಳಿಕೆ ಮಾಡಲಾಗಿದೆ. ಆಮದಾಗಿರುವ ಮತ್ತು ದೇಶದಲ್ಲಿ ತಯಾರಾಗಿರುವ ಉಪಕರಣಗಳು ಇವುಗಳಲ್ಲಿ ಸೇರಿವೆ  ಎಂದು ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ಗರಿಷ್ಠ ಬೆಲೆ ಇಳಿಕೆ (ಆಮದು ಉಪಕರಣ)
* ಪಲ್ಸ್‌ ಆಕ್ಸಿಮಿಟರ್‌
* ರಕ್ತದೊತ್ತಡ ಪರೀಕ್ಷಕ
* ನೆಬ್ಯುಲೈಸರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.