ಅಮೆಜಾನ್‌ನಲ್ಲಿ ಏ.ಸಿಗಳಿಗೆ ಹೆಚ್ಚಿದ ಬೇಡಿಕೆ

ಶನಿವಾರ, ಏಪ್ರಿಲ್ 20, 2019
27 °C

ಅಮೆಜಾನ್‌ನಲ್ಲಿ ಏ.ಸಿಗಳಿಗೆ ಹೆಚ್ಚಿದ ಬೇಡಿಕೆ

Published:
Updated:
Prajavani

ಬೆಂಗಳೂರು: ಬೇಸಿಗೆಯ ತಾಪಮಾನ ಏರಿಕೆಯಾಗುತ್ತಿದ್ದಂತೆ ಏ.ಸಿಗಳ ಖರೀದಿಗೆ ಗ್ರಾಹಕರು ಆನ್‌ಲೈನ್‌ ತಾಣಗಳಲ್ಲಿ ಮಾಹಿತಿ ಶೋಧಕ್ಕೆ ಮುಗಿ ಬೀಳುತ್ತಿದ್ದು, ಅವರ ಅಗತ್ಯಗಳನ್ನು ಪೂರೈಸಲು, ಖರೀದಿ ಮಾರ್ಗದರ್ಶನ ಮಾಡಲು ಆನ್‌ಲೈನ್‌ ಮಾರಾಟ ಮಳಿಗೆ ‘ಅಮೆಜಾನ್‌ಡಾಟ್‌ಇನ್‌’ ಕ್ರಮ ಕೈಗೊಂಡಿದೆ.

‘ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಏ.ಸಿಗಳ ಆಯ್ಕೆ ವಿಷಯದಲ್ಲಿ ಸೂಕ್ತ ಮಾರ್ಗದರ್ಶನ ಮಾಡಿ ಸರಿಯಾದ ಉತ್ಪನ್ನ ಖರೀದಿಗೆ ಸಂಸ್ಥೆ ನೆರವಾಗುತ್ತಿದೆ. ವೋಲ್ಟಾಸ್‌, ಎಲ್‌ಜಿ, ವರ್ಲಪೂಲ್‌, ಗೋದ್ರೇಜ್‌ ಮುಂತಾದ ಬ್ರ್ಯಾಂಡ್‌ಗಳಲ್ಲಿ ಹೆಚ್ಚಿನ ಖರೀದಿ ಆಸಕ್ತಿ ಕಂಡುಬರುತ್ತಿದೆ’ ಎಂದು ಸಂಸ್ಥೆಯ ಅಪ್ಲೈಯನ್ಸಸ್‌ ಆ್ಯಂಡ್‌ ಫರ್ನಿಚರ್‌ ವಿಭಾಗದ ನಿರ್ದೇಶಕ ಸುಚಿತ್‌ ಸುಭಾಷ್‌ ಹೇಳಿದ್ದಾರೆ.

‘ಏ.ಸಿಗಳ ಖರೀದಿಗೆ ಹೆಚ್ಚುವರಿ ವೆಚ್ಚ ಇಲ್ಲದ ತಿಂಗಳ ಸಮಾನ ಕಂತು (ಇಎಂಐ), ಖರೀದಿದಾರರ ಕಿಸೆಗೆ ಭಾರವಾಗದ ರೀತಿಯಲ್ಲಿ ಹಳೆಯ ಏ.ಸಿಗಳ ವಿನಿಮಯ, ವಿಳಂಬ ಇಲ್ಲದೆ ಮನೆ ಬಾಗಿಲಿಗೆ ಪೂರೈಕೆ ಮುಂತಾದ ಸೌಲಭ್ಯಗಳನ್ನು ರಾಜ್ಯದಾದ್ಯಮತ ಒದಗಿಸಲಾಗುವುದು. ಇನವರ್ಟರ್‌ ಏ.ಸಿಗಳ ಮಾಹಿತಿ ಶೋಧ ವರ್ಷದಿಂದ ವರ್ಷಕ್ಕೆ ಮೂರು ಪಟ್ಟು ಹೆಚ್ಚಾಗಿದೆ. ‘ಪ್ರೀಮಿಯಂ ಗೃಹೋಪಯೋಗಿ ಸಲಕರಣೆಗಳ ಖರೀದಿಸಲು ಗ್ರಾಹಕರು ಅಮೆಜಾನ್‌ ತಾಣದಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದು ಸಂಸ್ಥೆಯ ಮೇಲೆ ಅವರು ಇರಿಸಿರುವ ವಿಶ್ವಾಸದ ದ್ಯೋತಕವಾಗಿದೆ.

‘ದೊಡ್ಡ ಗಾತ್ರದ ಗೃಹೋಪಯೋಗಿ ಸಲಕರಣೆಗಳಿಗೆ ಅಮೆಜಾನ್‌ನಲ್ಲಿ ಭಾರಿ ಬೇಡಿಕೆ ಇದೆ. ಏ.ಸಿ, ವಾಷಿಂಗ್‌ ಮಷಿನ್‌, ಟಿವಿ ಮತ್ತು ರೆಫ್ರಿಜರೇಟರ್‌, ಚಿಮಣಿ, ಏರ್‌ ಪ್ಯೂರಿಫೈಯರ್‌ಗಳಿಗೆ ಸಂಬಂಧಿಸಿದಂತೆ ಜನಪ್ರಿಯ ಬ್ರ್ಯಾಂಡ್‌ನ 5 ಸಾವಿರಕ್ಕೂ ಹೆಚ್ಚು ಉತ್ಪನ್ನಗಳು ಖರೀದಿಗೆ ಲಭ್ಯ’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !