ಶೇ.18ರಷ್ಟು ಏಕರೂಪದ ಜಿಎಸ್‌ಟಿ ವಿಧಿಸುವಂತೆ ವಾಹನ ಬಿಡಿಭಾಗ ಉದ್ಯಮ ಒತ್ತಾಯ

7

ಶೇ.18ರಷ್ಟು ಏಕರೂಪದ ಜಿಎಸ್‌ಟಿ ವಿಧಿಸುವಂತೆ ವಾಹನ ಬಿಡಿಭಾಗ ಉದ್ಯಮ ಒತ್ತಾಯ

Published:
Updated:

ನವದೆಹಲಿ: ಏಕರೂಪದ ಶೇ 18ರಷ್ಟು ಜಿಎಸ್‌ಟಿ ವಿಧಿಸುವಂತೆ ವಾಹನ ಬಿಡಿಭಾಗ ಉದ್ಯಮವು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ತೆರಿಗೆ ದರ ಕಡಿಮೆ ಇದ್ದರೆ ಕಾಳಸಂತೆಗೆ ಕಡಿವಾಣ ಹಾಕಲು ಸಾಧ್ಯವಾಗಲಿದೆ. ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಹಾಗೂ ತಂತ್ರಜ್ಞಾನ ಕೇಂದ್ರ ಸ್ಥಾಪನೆಗೆ ಬಂಡವಾಳದ ನೆರವಿನ ಅಗತ್ಯವಿದೆ ಎಂದು ಉದ್ಯಮ ಅಭಿಪ್ರಾಯಪಟ್ಟಿದೆ.

2017–18ನೇ ಹಣಕಾಸು ವರ್ಷದಲ್ಲಿ ಉದ್ಯಮವು ₹ 3.45 ಲಕ್ಷ ಕೋಟಿ ವಹಿವಾಟು ನಡೆಸಿದ್ದು ಶೇ 18.3 ರಷ್ಟು ಪ್ರಗತಿ ಸಾಧಿಸಿದೆ. 

‘ಸದ್ಯಕ್ಕೆ ಶೇ 60 ರಷ್ಟು ಬಿಡಿಭಾಗಗಳು ಶೇ 18ರ ತೆರಿಗೆ ದರದಲ್ಲಿದ್ದರೆ ಇನ್ನುಳಿದ ಶೇ 40ರಷ್ಟು ಶೇ 28ರಲ್ಲಿವೆ. ದ್ವಿಚಕ್ರ ವಾಹನ ಮತ್ತು ಟ್ರ್ಯಾಕ್ಟರ್‌ ಬಿಡಿಭಾಗಗಳು ಗರಿಷ್ಠ ತೆರಿಗೆ ದರದಲ್ಲಿವೆ. ಇದಕ್ಕೆ ಬದಲಾಗಿ ಒಟ್ಟಾರೆ ಉದ್ಯಮವನ್ನು ಶೇ 18ರ ತೆರಿಗೆ ವ್ಯಾಪ್ತಿಗೆ ತರಬೇಕು’ ಎಂದು ವಾಹನಗಳ ಬಿಡಿಭಾಗ ತಯಾರಿಕಾ ಕಂಪನಿಗಳ ಒಕ್ಕೂಟದ (ಎಸಿಎಂಎ) ಅಧ್ಯಕ್ಷ ನಿರ್ಮಲ್‌ ಮಿಂದಾ ಅವರು ಒತ್ತಾಯಿಸಿದ್ದಾರೆ.

ದೇಶದ ಒಟ್ಟು ಆಂತರಿಕ ಉತ್ಪನ್ನದಲ್ಲಿ (ಜಿಡಿಪಿ) ಈ ಉದ್ಯಮದ ಕೊಡುಗೆ ಶೇ 2.3 ರಷ್ಟಿದೆ. ದೇಶದ ಒಟ್ಟು ರಫ್ತು ವಹಿವಾಟಿನಲ್ಲಿ ಶೇ 4ರಷ್ಟು ಪಾಲು ಹೊಂದಿದೆ.

ವಿದೇಶಿಯರಿಗೆ ಮರುಪಾವತಿ ಇಲ್ಲ: ಭಾರತಕ್ಕೆ ಬಂದು ಸರಕುಗಳನ್ನು ಖರೀದಿಸುವ ವಿದೇಶಿಯರಿಗೆ ಜಿಎಸ್‌ಟಿ ಮರುಪಾವತಿ ಸಿಗುವುದಿಲ್ಲ.

ಸಮಗ್ರ ಜಿಎಸ್‌ಟಿ  (ಐಜಿಎಸ್‌ಟಿ) ಕಾಯ್ದೆಯಲ್ಲಿ ಅಂತಹ ಅವಕಾಶ ಕಲ್ಪಿಸಲಾಗಿಲ್ಲ ಎಂದು ಹಣಕಾಸು ಸಚಿವಾಲಯವು ಮಾಹಿತಿ ಹಕ್ಕು ಕಾಯ್ದೆಯಲ್ಲಿ ಕೇಳಿರುವ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದೆ.

ಐಜಿಎಸ್‌ಟಿ ಕಾಯ್ದೆಯ ಸೆಕ್ಷನ್‌ 15ನ್ನು ಜಾರಿಗೊಳಿಸಿಲ್ಲ. ಹೀಗಾಗಿ ಸದ್ಯದ ಮಟ್ಟಿಗೆ ಮರುಪಾವತಿ ಇಲ್ಲ ಎಂದು ಕೇಂದ್ರೀಯ ನೇರ ತೆರಿಗೆ ಮತ್ತು ಕಸ್ಟಮ್ಸ್‌ ಮಂಡಳಿ (ಸಿಬಿಐಸಿ) ಪ್ರತಿಕ್ರಿಯೆ ನೀಡಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !