ನವದೆಹಲಿ/ನ್ಯೂಯಾರ್ಕ್ (ಪಿಟಿಐ): ಅಮೆರಿಕದ ನ್ಯಾಯಾಂಗ ಇಲಾಖೆಯು ಉದ್ಯಮಿ ಗೌತಮ್ ಅದಾನಿ ಹಾಗೂ ಅವರ ಸಂಬಂಧಿ ಸಾಗರ್ ಅವರ ವಿರುದ್ಧದ ಎಲ್ಲ ಕ್ರಿಮಿನಲ್ ಆರೋಪಗಳನ್ನು ಶಾಶ್ವತವಾಗಿ ಕೈಬಿಟ್ಟಿದೆ.

ಇದರಿಂದಾಗಿ ಅದಾನಿ ಸಮೂಹದ ವಿರುದ್ಧ ಅಮೆರಿಕದಲ್ಲಿ ನಡೆಯುತ್ತಿದ್ದ ಹಲವು ತನಿಖೆಗಳು ಕಳೆದ ಎರಡು ದಿನಗಳಲ್ಲಿ ಅಂತ್ಯ ಕಂಡಂತೆ ಆಗಿದೆ.

ಭಾರತದಲ್ಲಿನ ಸೌರವಿದ್ಯುತ್ ಯೋಜನೆಗಳ ವಿಚಾರವಾಗಿ ಅಮೆರಿಕದ ಹೂಡಿಕೆದಾರರಿಗೆ ಗೌತಮ್ ಅದಾನಿ ಮತ್ತು ಸಾಗರ್ ಅವರು ನೀಡಿದ ವಿವರಣೆಗೆ ಸಂಬಂಧಿಸಿದ ಸಿವಿಲ್ ಆರೋಪಗಳನ್ನು ಅಮೆರಿಕದ ಷೇರುಪೇಟೆ ಆಯೋಗವು ಇತ್ಯರ್ಥಪಡಿಸಿದೆ.

ಆರೋಪಗಳನ್ನು ಒಪ್ಪಿಕೊಳ್ಳದೆ, ಅವುಗಳನ್ನು ನಿರಾಕರಿಸದೆ ಗೌತಮ್ ಅದಾನಿ ಅವರು 6 ಮಿಲಿಯನ್ ಡಾಲರ್ (₹57 ಕೋಟಿ), ಸಾಗರ್ ಅದಾನಿ ಅವರು 12 ಮಿಲಿಯನ್ ಡಾಲರ್ (₹115 ಕೋಟಿ) ಪಾವತಿಸಲು ಒಪ್ಪಿದ್ದಾರೆ ಎಂಬುದನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳು ಹೇಳುತ್ತಿವೆ.

ಒಎಫ್ಎಸಿ ಜೊತೆ ಇತ್ಯರ್ಥ: ಅದಾನಿ ಸಮೂಹವು ನಿರ್ಬಂಧಗಳನ್ನು ಉಲ್ಲಂಘಿಸಿದ್ದಕ್ಕೆ ಸಂಬಂಧಿಸಿದ ಪ್ರಕರಣವೊಂದನ್ನು ಅಮೆರಿಕದ ಖಜಾನೆ ಇಲಾಖೆಯ ವಿದೇಶಿ ಆಸ್ತಿಗಳ ನಿಯಂತ್ರಣ ಕಚೇರಿಯ (ಒಎಫ್ಎಸಿ) ಜೊತೆ ಇತ್ಯರ್ಥಪಡಿಸಿಕೊಂಡಿದೆ.

ನಿರ್ಬಂಧಗಳಿಗೆ ಗುರಿಯಾಗಿರುವ ಇರಾನ್ನ ಎಲ್ಪಿಜಿಯನ್ನು ಗುಜರಾತ್ನ ಮುಂದ್ರಾ ಬಂದರಿನ ಮೂಲಕ ಆಮದು ಮಾಡಿಕೊಂಡಿದ್ದು ಎನ್ನಲಾದ ಪ್ರಕರಣ ಇದಾಗಿದೆ.

ಒಎಫ್ಎಸಿ ಇರಾನ್ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಉಲ್ಲಂಘಿಸಿದ್ದಕ್ಕಾಗಿ ಅದಾನಿ ಎಂಟರ್ಪ್ರೈಸಸ್ ಲಿಮಿಟೆಡ್ ಕಂಪನಿಯು ಅಮೆರಿಕದ ಒಎಫ್ಎಸಿಗೆ 275 ಮಿಲಿಯನ್ ಡಾಲರ್ (₹2,648 ಕೋಟಿ) ಪಾವತಿಸಿ, ತನ್ನ ಮೇಲಿನ ಸಿವಿಲ್ ಹೊಣೆಗಾರಿಕೆ ಯನ್ನು ಇತ್ಯರ್ಥಪಡಿಸಿಕೊಂಡಿದೆ.

ಈ ಮೊತ್ತ ಪಾವತಿಸಿ ಪ್ರಕರಣ ಇತ್ಯರ್ಥಪಡಿಸಿಕೊಂಡಿರುವುದು ಕಂಪನಿ ತಪ್ಪು ಮಾಡಿದೆ ಎಂಬ ಅರ್ಥ ನೀಡುವುದಿಲ್ಲ ಎಂದು ಕಂಪನಿಯು ಷೇರುಪೇಟೆಗೆ ನೀಡಿರುವ ಮಾಹಿತಿಯಲ್ಲಿ ತಿಳಿಸಿದೆ.

ನವದೆಹಲಿ/ನ್ಯೂಯಾರ್ಕ್ (ಪಿಟಿಐ): ಉದ್ಯಮಿ ಗೌತಮ್ ಅದಾನಿ ವಿರುದ್ಧದ ಎಲ್ಲ ಕ್ರಿಮಿನಲ್ ಆರೋಪಗಳನ್ನು ಅಮೆರಿಕದ ನ್ಯಾಯಾಂಗ ಇಲಾಖೆಯು ಶಾಶ್ವತವಾಗಿ ಕೈಬಿಟ್ಟಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-4-83349955

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.