ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5ಜಿ ಹರಾಜಿನಲ್ಲಿ ಅದಾನಿ, ಏರ್‌ಟೆಲ್‌, ಜಿಯೊ

Last Updated 12 ಜುಲೈ 2022, 11:13 IST
ಅಕ್ಷರ ಗಾತ್ರ

ನವದೆಹಲಿ: ಗೌತಮ್ ಅದಾನಿ ನೇತೃತ್ವದ ಅದಾನಿ ಡೇಟಾ ನೆಟ್‌ವರ್ಕ್ಸ್‌, ರಿಲಯನ್ಸ್ ಜಿಯೊ, ಭಾರ್ತಿ ಏರ್‌ಟೆಲ್‌ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳು 5ಜಿ ತರಂಗಾಂತರಗಳ ಹರಾಜಿನಲ್ಲಿ ಪಾಲ್ಗೊಳ್ಳಲು ಅರ್ಜಿ ಸಲ್ಲಿಸಿವೆ ಎಂದು ಕೇಂದ್ರ ದೂರಸಂಪರ್ಕ ಇಲಾಖೆ ತಿಳಿಸಿದೆ. ಅರ್ಜಿಗಳನ್ನು ಹಿಂಪಡೆಯಲು ಜುಲೈ 19ರವರೆಗೆ ಅವಕಾಶ ಇದೆ.

5ಜಿ ತರಂಗಾಂತರ ಹರಾಜು ಪ್ರಕ್ರಿಯೆ ಜುಲೈ 26ರಿಂದ ಶುರುವಾಗಲಿದೆ. ದೂರಸಂಪರ್ಕ ಉದ್ಯಮದಲ್ಲಿ ನೆಲೆ ಗಟ್ಟಿ ಮಾಡಿಕೊಳ್ಳಲು ಜಿಯೊ ಹಾಗೂ ಏರ್‌ಟೆಲ್‌ ಯತ್ನಿಸುತ್ತಿವೆ. ಈಗ ಅದಾನಿ ಸಮೂಹ ಕೂಡ 5ಜಿ ತರಂಗಾಂತರ ಖರೀದಿಗೆ ಉತ್ಸುಕತೆ ತೋರಿಸಿರುವ ಕಾರಣ, ಕೆಲವು ತರಂಗಾಂತರಗಳಿಗೆ ಬಿಡ್ ಜೋರಾಗಿ ನಡೆಯುವ ಸಾಧ್ಯತೆ ಇದೆ.

ಖಾಸಗಿ ನೆಟ್‌ವರ್ಕ್‌ ಸೇವೆ ನೀಡಲು ತಾನು ತರಂಗಾಂತರ ಹರಾಜಿನಲ್ಲಿ ಭಾಗಿಯಾಗುತ್ತಿರುವುದಾಗಿ ಅದಾನಿ ಸಮೂಹವು ಶನಿವಾರ ಹೇಳಿದೆ. ಕನಿಷ್ಠ ₹ 4.3 ಲಕ್ಷ ಕೋಟಿ ಮೌಲ್ಯದ ತರಂಗಾಂತರಗಳನ್ನು ಹರಾಜಿಗೆ ಇರಿಸಲಾಗುತ್ತದೆ.

‘ಅದಾನಿ ಸಮೂಹವು 5ಜಿ ತರಂಗಾಂತರ ಖರೀದಿಗೆ ಮುಂದಾಗಿರುವುದು ದೂರಸಂಪರ್ಕ ಉದ್ಯಮದಲ್ಲಿ ಈಗಾಗಲೇ ತೊಡಗಿಸಿಕೊಂಡಿರುವ ಕಂಪನಿಗಳ ಪಾಲಿಗೆ ನಕಾರಾತ್ಮಕ ಸುದ್ದಿ’ ಎಂದು ಬ್ಯಾಂಕ್ ಆಫ್ ಅಮೆರಿಕ ಸೆಕ್ಯುರಿಟೀಸ್ ಸೋಮವಾರ ಹೇಳಿದೆ.

‘ಮುಂಬರುವ ಹರಾಜು ಸಂದರ್ಭದಲ್ಲಿ ಅದಾನಿ ಸಮೂಹಕ್ಕೆ ತರಂಗಾಂತರ ಖರೀದಿಸಲು ಸಾಧ್ಯವಾದಲ್ಲಿ, ಖಾಸಗಿ ನೆಟ್‌ವರ್ಕ್‌ಗಾಗಿನ 5ಜಿ ತರಂಗಾಂತರಗಳ ಬೆಲೆ ಹೆಚ್ಚಳಕ್ಕೆ ಅದು ಕಾರಣವಾಗಬಹುದು. ಅಲ್ಲದೆ, ಮುಂದಿನ ದಿನಗಳಲ್ಲಿ ಅದಾನಿ ಸಮೂಹವು ಸಾರ್ವಜನಿಕರಿಗೆ ದೂರಸಂಪರ್ಕ ಸೇವೆ ಆರಂಭಿಸುವುದಕ್ಕೆ ದಾರಿ ಮಾಡಿಕೊಡಬಹುದು’ ಎಂದು ಗೋಲ್ಡ್‌ಮನ್‌ ಸಾಚ್ಸ್‌ ಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT