ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಮಂತರ ಪಟ್ಟಿಯಲ್ಲಿ 3ನೇ ಸ್ಥಾನದಿಂದ 34ಕ್ಕೆ: ಕುಸಿಯುತ್ತಲೇ ಇರುವ ಅದಾನಿ

Last Updated 28 ಫೆಬ್ರುವರಿ 2023, 16:23 IST
ಅಕ್ಷರ ಗಾತ್ರ

ನವದೆಹಲಿ: ಉದ್ಯಮಿ ಗೌತಮ್‌ ಅದಾನಿ ಅವರು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನದಿಂದ 34ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಇತ್ತೀಚೆಗಷ್ಟೇ ಅವರು 30ನೇ ಸ್ಥಾನದಲ್ಲಿದ್ದರು. ಆದರೆ, ‌ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್‌ ವರದಿ ಪರಿಣಾಮವಾಗಿ ಅವರ ಕುಸಿತ ಮುಂದುವರಿಯುತ್ತಲೇ ಸಾಗಿದೆ.

ವರದಿ ಬಿಡುಗಡೆಗೂ ಮೊದಲು ಅವರ ಸಂಪತ್ತಿನ ಮೌಲ್ಯವು ₹9.96 ಲಕ್ಷ ಕೋಟಿಯಷ್ಟು ಇತ್ತು. ಆದರೆ ಇದೀಗ ಅವರ ಸಂಪತ್ತು ಮೌಲ್ಯ ₹2.89 ಲಕ್ಷ ಕೋಟಿಗೆ ಇಳಿಕೆ ಆಗಿದ್ದು, ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 34ನೇ ಸ್ಥಾನಕ್ಕೆ ಕುಸಿಯುವಂತಾಗಿದೆ.

ಕಳೆದ ವರ್ಷ ಮುಕೇಶ್‌ ಅಂಬಾನಿ ಅವರನ್ನು ಹಿಂದಿಕ್ಕುವ ಮೂಲಕ ಅದಾನಿ ಅವರು ಏಷ್ಯಾದ ಸಿರಿವಂತರ ಪಟ್ಟಿಯಲ್ಲಿ ಮೊದಲ ಮತ್ತು ವಿಶ್ವದ ಮೂರನೇ ಸಿರಿವಂತ ಉದ್ಯಮಿ ಸ್ಥಾನಕ್ಕೆ ಏರಿದ್ದರು. ಮುಕೇಶ್‌ ಅಂಬಾನಿ ಅವರು ವಿಶ್ವದ ಸಿರಿವಂತರ ಪಟ್ಟಿಯಲ್ಲಿ ಸದ್ಯ 8ನೇ ಸ್ಥಾನದಲ್ಲಿ ಇದ್ದಾರೆ. ಅವರ ಒಟ್ಟು ಸಂಪತ್ತು ಮೌಲ್ಯ ₹ 6.82 ಲಕ್ಷ ಕೋಟಿ ಇದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT