ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹2.5 ಕೋಟಿ ಸಂಗ್ರಹಕ್ಕೆ ಒಪ್ಪಿಗೆ: ಅದಾನಿ ಗ್ರೀನ್‌ ಎನರ್ಜಿ

Last Updated 27 ಜೂನ್ 2020, 10:29 IST
ಅಕ್ಷರ ಗಾತ್ರ

ನವದೆಹಲಿ: ಅದಾನಿ ಗ್ರೀನ್‌ ಎನರ್ಜಿ ಕಂಪನಿಯು ಮಾರುಕಟ್ಟೆಯಿಂದ ₹ 2,500 ಕೋಟಿ ಸಂಗ್ರಹಿಸಲು ಷೇರುದಾರರ ಒಪ್ಪಿಗೆ ಪಡೆದುಕೊಂಡಿದೆ.

ಗುರುವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಬಂಡವಾಳ ಸಂಗ್ರಹಿಸಲು ಒಪ್ಪಿಗೆ ಪಡೆದುಕೊಳ್ಳಲಾಗಿದೆ.ಒಂದು ಅಥವಾ ಎರಡು ಹಂತಗಳಲ್ಲಿ ಬಂಡವಾಳ ಸಂಗ್ರಹಿಸಲಾಗುವುದು ಷೇರುಪೇಟೆಗೆ ಶನಿವಾರ ಮಾಹಿತಿ ನೀಡಿದೆ.

ಗೌತಮ್‌ ಎಸ್‌. ಅದಾನಿ ಅವರನ್ನು ನಿರ್ದೇಶಕರನ್ನಾಗಿ ಮರು ನೇಮಕ ಮಾಡಲು ಷೇರುದಾರರು ಸಮ್ಮತಿಸಿದ್ದಾರೆ.

ವಹಿವಾಟಿನ ಪ್ರಗತಿ ಮತ್ತು ವಿಸ್ತರಣೆಯ ಮತ್ತು ಕಂಪನಿಯ ಹಣಕಾಸು ಸ್ಥಿತಿಯನ್ನು ಬಲಪಡಿಸುವ ಉದ್ದೇಶದಿಂದ ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಬಂಡವಾಳದ ಬಳಕೆ ಮತ್ತು ದೀರ್ಘಾವಧಿಗೆ ಬಂಡವಾಳ ಸಂಗ್ರಹಿಸುವ ಕುರಿತಾಗಿಯೂ ಷೇರುದಾರರ ಒಪ್ಪಿಗೆ ಪಡೆದಿರುವುದಾಗಿ ಹೇಳಿದೆ.

ಅಹಮದಾಬಾದ್‌ನಲ್ಲಿರುವ ಅದಾನಿ ಹೌಸ್‌ನಿಂದ ಅದಾನಿ ಕಾರ್ಪರೇಟ್‌ ಹೌಸ್‌ಗೆ ಕಚೇರಿಯನ್ನು ಸ್ಥಳಾಂತರಿಸುವ ನಿರ್ಧಾರಕ್ಕೂ ಒಪ್ಪಿಗೆ ದೊರೆತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT