ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಿ ಮುಂಬೈ ವಿಮಾನ ನಿಲ್ದಾಣ: ಎಸ್‌ಬಿಐನಿಂದ ನೆರವು

Last Updated 4 ಏಪ್ರಿಲ್ 2022, 14:04 IST
ಅಕ್ಷರ ಗಾತ್ರ

ನವದೆಹಲಿ: ಅದಾನಿ ಸಮೂಹಕ್ಕೆ ನವಿ ಮುಂಬೈ ವಿಮಾನ ನಿಲ್ದಾಣ ಯೋಜನೆಗೆ ಅಗತ್ಯವಿರುವ ₹ 12,770 ಕೋಟಿ ಮೊತ್ತದ ಸಾಲವನ್ನು ಹೊಂದಿಸಿಕೊಡುವ ಜವಾಬ್ದಾರಿಯನ್ನು (debt underwriting) ಎಸ್‌ಬಿಐ ಹೊತ್ತುಕೊಂಡಿದೆ ಎಂದು ಅದಾನಿ ಸಮೂಹದ ಪ್ರಕಟಣೆ ತಿಳಿಸಿದೆ.

ಅದಾನಿ ಸಮೂಹವು ಹಿಂದಿನ ವರ್ಷದ ಜುಲೈ ತಿಂಗಳಿನಲ್ಲಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ನವಿ ಮುಂಬೈ ವಿಮಾನ ನಿಲ್ದಾಣ ಯೋಜನೆಯನ್ನು ಜಿವಿಕೆ ಸಮೂಹದಿಂದ ತಾನು ವಹಿಸಿಕೊಂಡಿದೆ.

ನವಿ ಮುಂಬೈ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ ಪ್ರೈವೇಟ್ ಲಿಮಿಟೆಡ್‌ (ಎನ್‌ಎಂಐಎಎಲ್‌), ಅದಾನಿ ಎಂಟರ್‌ಪ್ರೈಸಸ್‌ ಲಿಮಿಟೆಡ್‌ನ ಅಂಗಸಂಸ್ಥೆ.

‘ಎಸ್‌ಬಿಐ ಕಡೆಯಿಂದ ಈ ಸೌಲಭ್ಯ ದೊರೆತಿರುವ ಕಾರಣ, ಮುಂಬೈ ಮಹಾನಗರಕ್ಕೆ ಇನ್ನೊಂದು ಮೈಲಿಗಲ್ಲು ಎನ್ನಬಹುದಾದ ಸೌಕರ್ಯವನ್ನು ಕಲ್ಪಿಸುವತ್ತ ನಾವು ಒಂದು ಹೆಜ್ಜೆ ಮುಂದಕ್ಕೆ ಸಾಗಿದ್ದೇವೆ’ ಎಂದು ಎನ್‌ಎಂಐಎಎಲ್‌ ನಿರ್ದೇಶಕ ಜೀತ್ ಅದಾನಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT