ನವದೆಹಲಿ: ದೇಶದ ನಿಯಂತ್ರಣ ಸಂಸ್ಥೆಗಳು ಉತ್ತಮ ಅನುಭವ ಹೊಂದಿದ್ದು, ಅದಾನಿ ಸಮೂಹಕ್ಕೆ ಸಂಬಂಧಿಸಿದ ವಿಷಯಗಳ ಪರಿಶೀಲನೆ ನಡೆಸುತ್ತಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಹೇಳಿದ್ದಾರೆ.
ಅದಾನಿ ಸಮೂಹದ ಷೇರುಗಳ ಮೌಲ್ಯವು ಕೃತಕವಾಗಿ ಕುಸಿಯುವಂತೆ ಮಾಡಿ ಮುಗ್ಧ ಹೂಡಿಕೆದಾರರನ್ನು ಶೋಷಿಸಲಾಗಿದೆ ಎಂದು ಆರೋಪಿಸಿ ಸಲ್ಲಿಕೆ ಆಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಹೂಡಿಕೆದಾರರ ಹಿತರಕ್ಷಣೆ ಮಾಡುವ ಸಂಬಂಧ ಕೇಂದ್ರ ಮತ್ತು ಸೆಬಿ ಅಭಿಪ್ರಾಯ ಕೇಳಿದೆ. ಈ ಕುರಿತು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವೆ, ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಏನನ್ನು ಹೇಳಲಿದೆ ಎಂದು ನಾನು ಬಹಿರಂಗಪಡಿಸುವುದಿಲ್ಲ ಎಂದಿದ್ದಾರೆ. ದೇಶದ ನಿಯಂತ್ರಣ ಸಂಸ್ಥೆಗಳಿಗೆ ಉತ್ತಮ ಅನುಭವ ಇದ್ದು ತಮ್ಮ ಕಾರ್ಯ ಕ್ಷೇತ್ರದಲ್ಲಿ ಪರಿಣತಿಯನ್ನೂ ಹೊಂದಿವೆ ಎಂದು ಹೇಳಿದ್ದಾರೆ.
ಷೇರು ಅಡಮಾನ: ಅದಾನಿ ಪೋರ್ಟ್ಸ್, ಅದಾನಿ ಟ್ರಾನ್ಸ್‌ಮಿಷನ್ ಮತ್ತು ಅದಾನಿ ಗ್ರೀನ್ ಎನರ್ಜಿ ಕಂಪನಿಗಳು ಎಸ್‌ಬಿಐಕ್ಯಾಪ್ ಟ್ರಸ್ಟೀ ಕಂಪನಿಯಲ್ಲಿ ತಮ್ಮ ಷೇರುಗಳನ್ನು ಅಡಮಾನವಾಗಿ ಇಟ್ಟಿವೆ.
ಅದಾನಿ ಎಂಟರ್‌ಪ್ರೈಸಸ್‌ಗೆ ಸಾಲ ನೀಡಿರುವ ಸಂಸ್ಥೆಗಳ ‘ಸೆಕ್ಯುರಿಟಿ ಟ್ರಸ್ಟೀ’ ಆಗಿ ಅದಾನಿ ಸಮೂಹದ ಕಂಪನಿಗಳಿಂದ ಷೇರುಗಳನ್ನು ಅಡಮಾನ ಇಟ್ಟುಕೊಂಡಿರುವುದಾಗಿ ಅದು ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.