ಗುರುವಾರ , ಮೇ 19, 2022
23 °C

ಹೆಚ್ಚಲಿದೆ ಜಾಹೀರಾತು ಹೂಡಿಕೆ: ಪ್ರಶಾಂತ್‌ ಕುಮಾರ್ ಅಭಿಪ್ರಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಗ್ರೂಪ್‌ಎಂ ಇಂಡಿಯಾ ಕಂಪನಿಯು 2021ರ ಕ್ಯಾಲೆಂಡರ್ ವರ್ಷದಲ್ಲಿ ಭಾರತದಲ್ಲಿ ಜಾಹೀರಾತುಗಳ ಮೇಲೆ ಎಷ್ಟು ಹಣ ಖರ್ಚಾಗಬಹುದು ಎಂಬುದರ ಅಂದಾಜನ್ನು ಬಿಡುಗಡೆ ಮಾಡಿದೆ. ಕಂಪನಿಯ ಪ್ರಕಾರ 2021ರಲ್ಲಿ ದೇಶದಲ್ಲಿ ಜಾಹೀರಾತುಗಳ ಮೇಲೆ ₹ 80,123 ಕೋಟಿ ಹೂಡಿಕೆ ಆಗಲಿದೆ.

‘ಈ ವರ್ಷ, ಮುಂದಿನ ವರ್ಷ’ ಎಂಬ ಶೀರ್ಷಿಕೆ ಹೊತ್ತಿರುವ ಈ ಅಂದಾಜುಗಳ ವರದಿಯು, 2021ರಲ್ಲಿ ಜಾಹೀರಾತುಗಳ ಮೇಲಿನ ಹೂಡಿಕೆಯಲ್ಲಿ ಶೇಕಡ 23.2ರಷ್ಟು ಹೆಚ್ಚಳ ಆಗಲಿದೆ ಎಂದು ಹೇಳಿದೆ. ಜಾಗತಿಕ ಮಟ್ಟದಲ್ಲಿ ಜಾಹೀರಾತುಗಳ ಮೇಲೆ ವೆಚ್ಚ ಮಾಡುವ ದೇಶಗಳ ಸಾಲಿನಲ್ಲಿ ಭಾರತವು 2019ರಲ್ಲಿ 9ನೆಯ ಸ್ಥಾನದಲ್ಲಿತ್ತು. ದೇಶವು 2020ರಲ್ಲಿ 10ನೆಯ ಸ್ಥಾನಕ್ಕೆ ಇಳಿಯಿತು, 2021ರಲ್ಲಿ ಮತ್ತೆ 9ನೆಯ ಸ್ಥಾನವನ್ನು ಗಳಿಸಿಕೊಳ್ಳಲಿದೆ ಎಂದು ವರದಿ ಭವಿಷ್ಯ ನುಡಿದಿದೆ.

‘2020ರಲ್ಲಿ ಎಲ್ಲ ವಲಯಗಳ ಮೇಲೆಯೂ ಪರಿಣಾಮ ಆದಂತೆ, ಜಾಹೀರಾತು ವೆಚ್ಚಗಳ ಮೇಲೆಯೂ ಪರಿಣಾಮ ಉಂಟಾಯಿತು. ಆದರೆ, 2020ರ ಮೂರನೆಯ ತ್ರೈಮಾಸಿಕದಿಂದ ಚೇತರಿಕೆಯನ್ನು ಕಾಣುತ್ತಿದ್ದೇವೆ. 2021ರ ವಿಚಾರದಲ್ಲಿ ನಾವು ಆಶಾವಾದಿ ಆಗಿದ್ದೇವೆ. ಜಾಗತಿಕ ಮಟ್ಟದಲ್ಲಿ ಜಾಹೀರಾತುಗಳ ಮೇಲಿನ ವೆಚ್ಚವು 2021ರಲ್ಲಿ ಶೇ 10ರಷ್ಟು ಏರಿಕೆ ಕಾಣಲಿದೆ ಎಂಬ ನಿರೀಕ್ಷೆ ಇದೆ. ಇದರಲ್ಲಿ ಶೇ 67ರಷ್ಟನ್ನು ಡಿಜಿಟಲ್ ಮಾಧ್ಯಮವು ಸೆಳೆದುಕೊಳ್ಳುವ ಸಾಧ್ಯತೆ ಇದೆ’ ಎಂದು ಗ್ರೂಪ್‌ಎಂ ಕಂಪನಿಯ ದಕ್ಷಿಣ ಏಷ್ಯಾ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ರಶಾಂತ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು