ನವದೆಹಲಿ: ಹೋಟೆಲ್ಗಳಿಂದ ಊಟ, ತಿಂಡಿ–ತಿನಿಸುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಸ್ವಿಗ್ಗಿ ಕಂಪನಿಯು ತನ್ನ ಪ್ಲ್ಯಾಟ್ಫಾರ್ಮ್ ಶುಲ್ಕವನ್ನು ₹17.58ಕ್ಕೆ ಹೆಚ್ಚಿಸಿದೆ. ಪ್ರತಿಸ್ಪರ್ಧಿ ಕಂಪನಿಯಾದ ಜೊಮಾಟೊ ಈಚೆಗೆ ತನ್ನ ಪ್ಲ್ಯಾಟ್ಫಾರ್ಮ್ ಶುಲ್ಕ ಹೆಚ್ಚಳ ಮಾಡಿದೆ.

ಸ್ವಿಗ್ಗಿ ಕಂಪನಿಯು ಕಳೆದ ವರ್ಷದ ಸೆಪ್ಟೆಂಬರ್ನಲ್ಲಿಯೂ ಶುಲ್ಕ ಹೆಚ್ಚಳ ಮಾಡಿತ್ತು. ಕಂಪನಿಯ ಈಗಿನ ಪ್ಲ್ಯಾಟ್ಫಾರ್ಮ್ ಶುಲ್ಕ ₹17.58 ಜಿಎಸ್ಟಿಯನ್ನು ಕೂಡ ಒಳಗೊಂಡಿದೆ.

ಕಂಪನಿಗಳು ತಮ್ಮ ಕಾರ್ಯಾಚರಣೆ ವೆಚ್ಚ, ತಂತ್ರಜ್ಞಾನ ನಿರ್ವಹಣಾ ವೆಚ್ಚ, ಗ್ರಾಹಕ ಸೇವೆಗಳಿಗೆ ಆಗುವ ವೆಚ್ಚವನ್ನು ನಿಭಾಯಿಸಲು ಪ್ಲ್ಯಾಟ್ಫಾರ್ಮ್ ಶುಲ್ಕವನ್ನು ವಿಧಿಸುತ್ತವೆ. ಇದಲ್ಲದೆ ಗ್ರಾಹಕರು ರೆಸ್ಟಾರೆಂಟ್ ಶುಲ್ಕ ಹಾಗೂ ಮನೆಗೆ ತಲುಪಿಸಿದ್ದಕ್ಕೆ ಪ್ರತ್ಯೇಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.