ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ₹8,004 ಕೋಟಿ ಪಾವತಿಸಿದ ಭಾರ್ತಿ ಏರ್‌ಟೆಲ್‌: ಇನ್ನೂ ಇದೆಯೇ ಬಾಕಿ ಮೊತ್ತ? 

Last Updated 29 ಫೆಬ್ರುವರಿ 2020, 7:52 IST
ಅಕ್ಷರ ಗಾತ್ರ

ನವದೆಹಲಿ: ಹೊಂದಾಣಿಕೆ ಮಾಡಿದ ಒಟ್ಟು ವರಮಾನ (ಎಜಿಆರ್‌) ಸಂಬಂಧಿಸಿದ ಬಾಕಿ ಪೈಕಿ ದೂರ ಸಂಪರ್ಕ ಇಲಾಖೆಗೆ ಮತ್ತೆ ₹8,004 ಕೋಟಿ ಪಾವತಿಸಿರುವುದಾಗಿ ಭಾರ್ತಿ ಏರ್‌ಟೆಲ್‌ ಶನಿವಾರ ಹೇಳಿದೆ.

ಸುಪ್ರೀಂ ಕೋರ್ಟ್‌ ಆದೇಶದ ನಂತರ 2020ರ ಫೆಬ್ರುವರಿ 17ರಂದು ಕಂಪನಿ ₹10,000 ಕೋಟಿ ಪಾವತಿಸಿತ್ತು.

2019ರ ಡಿಸೆಂಬರ್‌ 31ರ ವರೆಗಿನ ಲೆಕ್ಕಾಚಾರ ನಡೆಸಿದ್ದು, ಪ್ರಸ್ತುತ ಪಾವತಿಸಿರುವ ₹8,004 ಕೋಟಿ 2020ರ ಫೆಬ್ರುವರಿ 29ರ ವರೆಗಿನ ಬಡ್ಡಿ ಮೊತ್ತವನ್ನೂ ಒಳಗೊಂಡಿರುವುದಾಗಿ ತಿಳಿಸಿದೆ. ‌

ಭಾರ್ತಿ ಏರ್‌ಟೆಲ್‌, ಭಾರ್ತಿ ಹೆಕ್ಸಾಕಾಮ್‌ ಮತ್ತು ಟೆಲಿನಾರ್‌ ಇಂಡಿಯಾಗೆ ಸಂಬಂಧಿಸಿದ ಬಾಕಿ ಮೊತ್ತವನ್ನು ಭಾರ್ತಿ ಗ್ರೂಪ್‌ ಆಫ್‌ ಕಂಪನೀಸ್‌ನ ಪರವಾಗಿ ಪಾವತಿಸಲಾಗಿದೆ. ಫೆಬ್ರುವರಿ 17ರಂದು ₹10,000 ಕೋಟಿ ಪಾವತಿಸಲಾಗಿತ್ತು. ಅಂತಿಮ ಮತ್ತು ಪೂರ್ಣ ಪಾವತಿಯಾಗಿ ₹3,004 ಕೋಟಿ ಪಾವತಿಸಿದ್ದು, ಹೆಚ್ಚುವರಿಯಾಗಿ ₹5,000 ಕೋಟಿ ಠೇವಣಿ ಇಡಲಾಗಿದೆ ಎಂದು ಹೇಳಿದೆ.

ಏರ್‌ಟೆಲ್‌ ಈವರೆಗೂ ₹13,004 ಕೋಟಿ ಪಾವತಿಸಿದಂತಾಗಿದೆ. ಠೇವಣಿ ಇರಿಸಿರುವ ₹5,000 ಕೋಟಿ ಹೆಚ್ಚುವರಿ ಮೊತ್ತವನ್ನು ಲೆಕ್ಕಾಚಾರದ ವ್ಯತ್ಯಾಸಗಳಿಗೆ ಬಳಕೆಯಾಗಬಹುದು ಅಥವಾ ಮರು ಪಾವತಿಯಾಗಬಹುದು. ದೂರ ಸಂಪರ್ಕ ಇಲಾಖೆ ಪ್ರಕಾರ, ತರಂಗಾಂತರ ಬಳಕೆ, ಪರವಾನಗಿ ಶುಲ್ಕ, ಬಡ್ಡಿ ಹಾಗೂ ದಂಡ ಸೇರಿದಂತೆ ಭಾರ್ತಿ ಏರ್‌ಟೆಲ್‌ ಒಟ್ಟು ₹35,586 ಕೋಟಿ ಪಾವತಿಸಬೇಕಿದೆ.

ಕಂಪನಿ 2006–07ನೇ ಹಣಕಾಸು ವರ್ಷದಿಂದ 2019 ಡಿಸೆಂಬರ್‌ 31ರ ವರೆಗಿನ ಅವಧಿಯ ಲೆಕ್ಕಾಚಾರಗಳ ಸ್ವ–ಅವಲೋಕನ ನಡೆಸಿದ್ದು, ಹೊಂದಾಣಿಕೆ ಮಾಡಿದ ಒಟ್ಟು ವರಮಾನ (ಎಜಿಆರ್‌) ಕುರಿತ ಆದೇಶದಂತೆ ಬಡ್ಡಿಯನ್ನೂ ಪಾವತಿಸಿರುವುದಾಗಿ ಭಾರ್ತಿ ಏರ್‌ಟೆಲ್‌ ಹೇಳಿದೆ.

ಹೊಂದಾಣಿಕೆ ಮಾಡಿದ ಒಟ್ಟು ವರಮಾನ (ಎಜಿಆರ್‌) ಸಂಬಂಧಿಸಿ ಏರ್‌ಟೆಲ್‌, ವೊಡಾಫೋನ್‌ ಐಡಿಯಾ ಸೇರಿದಂತೆ ಟೆಲಿಕಾಂ ಕಂಪನಿಗಳು ಕೇಂದ್ರ ಸರ್ಕಾರಕ್ಕೆ ₹1.47 ಲಕ್ಷ ಕೋಟಿ ಪಾವತಿಸುವ ಬಗ್ಗೆ ನೀಡಿದ್ದ ಆದೇಶ ಪಾಲನೆಯಾಗದ್ದಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಸುಪ್ರೀಂ ಕೋರ್ಟ್‌ 2019ರ ಅಕ್ಟೋಬರ್‌ 24ರಂದು ನೀಡಿದ್ದ ಆದೇಶದ ಪ್ರಕಾರ ಜನವರಿ 23ರಂದು ಟೆಲಿಕಾಂ ಆಪರೇಟರ್‌ಗಳು ಬಾಕಿ ಮೊತ್ತ ಸರ್ಕಾರಕ್ಕೆ ಪಾವತಿಸಬೇಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT