ಸೋಮವಾರ, ಜುಲೈ 4, 2022
24 °C

‘ಏರ್ ಇಂಡಿಯಾ’ ಹೆಸರು ಬಂದಿದ್ದು ಹೀಗೆ...

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: 75 ವರ್ಷಗಳಿಗೂ ಹಿಂದೆ ಟಾಟಾ ಸಮೂಹದ ನೌಕರರಿಂದ ಅಭಿಪ್ರಾಯ ಸಂಗ್ರಹಿಸಿ, ನಾಲ್ಕು ಹೆಸರುಗಳ ಪೈಕಿ ಒಂದನ್ನು ಅಂತಿಮಗೊಳಿಸಿ, ಆ ಹೆಸರನ್ನು ದೇಶದ ಮೊದಲ ವಿಮಾನಯಾನ ಕಂಪನಿಗೆ ಇರಿಸಲಾಯಿತು. ಆ ಹೆಸರು ‘ಏರ್ ಇಂಡಿಯಾ’.

ಏರ್ ಇಂಡಿಯಾ ಕಂಪನಿಯನ್ನು ಸ್ವಾಧೀನಕ್ಕೆ ತೆಗೆದುಕೊಂಡಿರುವ ಟಾಟಾ ಸಮೂಹವು, ಈ ವಿಮಾನಯಾನ ಕಂಪನಿಗೆ ಸಂಬಂಧಿಸಿದ ಕೆಲವು ವಿವರಗಳನ್ನು ಹಂಚಿಕೊಂಡಿದೆ.

1946ರಲ್ಲಿ ಟಾಟಾ ಏರ್‌ಲೈನ್ಸ್, ಟಾಟಾ ಸನ್ಸ್‌ನ ಒಂದು ವಿಭಾಗವಾಗಿ ಇದ್ದುದು ಒಂದು ಪ್ರತ್ಯೇಕ ಕಂಪನಿಯಾಯಿತು. ಆಗ ಇದಕ್ಕೆ ಒಂದು ಹೆಸರು ಹುಡುಕಬೇಕಿತ್ತು. ‘ಇಂಡಿಯನ್ ಏರ್‌ಲೈನ್ಸ್, ಪ್ಯಾನ್–ಇಂಡಿಯನ್ ಏರ್‌ಲೈನ್ಸ್, ಟ್ರಾನ್ಸ್‌–ಇಂಡಿಯನ್‌ ಏರ್‌ಲೈನ್ಸ್‌ ಮತ್ತು ಏರ್‌ ಇಂಡಿಯಾ ಹೆಸರುಗಳ ನಡುವೆ ಯಾವುದಾದರೂ ಒಂದನ್ನು ಆಯ್ಕೆ ಮಾಡಬೇಕಿತ್ತು’ ಎಂದು ಟಾಟಾ ಸಮೂಹ ಹೇಳಿದೆ.

ಟಾಟಾ ಸಮೂಹಕ್ಕೆ ಸೇರಿದ ಬಾಂಬೆ ಹೌಸ್‌ನಲ್ಲಿ, ಅಭಿಪ್ರಾಯ ಸಂಗ್ರಹಿಸುವ ಮೂಲಕ ಒಂದು ಹೆಸರನ್ನು ಆಯ್ಕೆ ಮಾಡಲು ತೀರ್ಮಾನಿಸಲಾಯಿತು. ಟಾಟಾ ಕಂಪನಿಯ ನೌಕರರ ಪ್ರತಿನಿಧಿಗಳಿಂದ ಅಭಿಪ್ರಾಯ ಸಂಗ್ರಹಿಸಲಾಯಿತು. ಮತಪತ್ರಗಳ ಮೇಲೆ ಮೊದಲ ಹಾಗೂ ಎರಡನೆಯ ಆಯ್ಕೆಯನ್ನು ತಿಳಿಸುವಂತೆ ಹೇಳಲಾಯಿತು.

ಏರ್‌ ಇಂಡಿಯಾ ಹೆಸರಿಗೆ ಹೆಚ್ಚು ಮತಗಳು ಬಂದಿದ್ದವು. ಈ ಮೂಲಕ ಏರ್‌ ಇಂಡಿಯಾ ಹೆಸರನ್ನು ಅಂತಿಮಗೊಳಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು