ಭಾನುವಾರ, ನವೆಂಬರ್ 17, 2019
28 °C

ಏರ್‌ ಇಂಡಿಯಾ ಮಾರಾಟ: ನವೆಂಬರ್‌ನಲ್ಲಿ ಬಿಡ್‌ ಸಾಧ್ಯತೆ

Published:
Updated:

ನವದೆಹಲಿ: ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯ ಶೇ 100ರಷ್ಟು ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರವು ನವೆಂಬರ್‌ನಲ್ಲಿ ಪ್ರಾಥಮಿಕ ಬಿಡ್‌ ಕರೆಯುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಏರ್‌ ಇಂಡಿಯಾ ಖರೀದಿಗೆ ಈಗಾಗಲೇ ಕೆಲವು ಸಂಸ್ಥೆಗಳು ಆಸಕ್ತಿ ತೋರಿಸಿವೆ. ಖರೀದಿ ಆಸಕ್ತಿ ಪತ್ರವನ್ನು ಶೀಘ್ರವೇ ಅಂತಿಮಗೊಳಿಸಲಾಗುವುದು ಎಂದು ತಿಳಿಸಿವೆ.

ಇ–ಹರಾಜಿನ ಮೂಲಕ ‘ಎಐ‘ ಹರಾಜು ಪ್ರಕ್ರಿಯೆ ನಡೆಸಲು ನಿರ್ಧರಿಸಲಾಗಿದೆ. ನಷ್ಟದಲ್ಲಿರುವ ವಿಮಾನಯಾನ ಸಂಸ್ಥೆಯು ₹ 58 ಸಾವಿರ ಕೋಟಿ ಸಾಲ ಬಾಕಿ ಉಳಿಸಿಕೊಂಡಿದೆ.

ನಾಗರಿಕ ವಿಮಾನಯಾನ ಕಾರ್ಯದರ್ಶಿ ಪ್ರದೀಪ್‌ ಸಿಂಗ್ ಖರೋಲಾ ಅವರು ಕಳೆದವಾರ ಸಂಸ್ಥೆಯ ಸ್ಥಿತಿಗತಿಯ ಬಗ್ಗೆ ಪರಿಶೀಲನಾ ಸಭೆ ನಡೆಸಿದ್ದಾರೆ. ಮಂಗಳವಾರ ಸಂಸ್ಥೆಯ ಆಡಳಿತ ಮಂಡಳಿ ಸಭೆ ನಡೆಯಲಿದ್ದು, 2019ರ ಮಾರ್ಚ್‌ ಅಂತ್ಯಕ್ಕೆ ಹಣಕಾಸು ವರದಿಗೆ ಒಪ್ಪಿಗೆ ದೊರೆಯುವ ಸಾಧ್ಯತೆ ಇದೆ.

ಪ್ರತಿಕ್ರಿಯಿಸಿ (+)