ನವದೆಹಲಿ: ಏರ್ ಇಂಡಿಯಾ ಕಂಪನಿಯು ಈ ವರ್ಷದಲ್ಲಿ 4,200 ಸಿಬ್ಬಂದಿ ಮತ್ತು 900 ಪೈಲಟ್‌ಗಳನ್ನು ನೇಮಿಸಿಕೊಳ್ಳಲಿದೆ.
ಟಾಟಾ ಸಮೂಹದ ಒಡೆತನದಲ್ಲಿ ಇರುವ ಕಂಪನಿಯು ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುತ್ತಿದ್ದು, ಇದರ ಭಾಗವಾಗಿ ಈ ನೇಮಕ ಮಾಡಿಕೊಳ್ಳುತ್ತಿದೆ.
ಹೊಸ ವಿಮಾನಗಳನ್ನು ಖರೀದಿ ಮಾಡಿರುವುದು, ದೇಶಿ ಮತ್ತು ಅಂತರರಾಷ್ಟ್ರೀಯ ಕಾರ್ಯಾಚರಣೆಯನ್ನು ವಿಸ್ತರಣೆ ಮಾಡುತ್ತಿರುವುದರಿಂದಾಗಿ ಈ ನೇಮಕಾತಿಗೆ ಯೋಜನೆ ರೂಪಿಸಿರುವುದಾಗಿ ಕಂಪನಿಯು ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ.
2022ರ ಮೇ ನಿಂದ 2023ರ ಫೆಬ್ರುವರಿ ಅವಧಿಯಲ್ಲಿ ಕಂಪನಿಯು 1,900 ಸಿಬ್ಬಂದಿಯನ್ನು ನೇಮಿಸಿಕೊಂಡಿದೆ. ಇವರಲ್ಲಿ 1,100 ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದು ಅದು ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.