ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಹೊಡೆತ; ಏರ್‌ ಏಷ್ಯಾ ಜತೆ ಮಲೇಷ್ಯಾ ಏರ್‌ಲೈನ್ಸ್ ವಿಲೀನಕ್ಕೆ ಚಿಂತನೆ

Last Updated 17 ಏಪ್ರಿಲ್ 2020, 11:54 IST
ಅಕ್ಷರ ಗಾತ್ರ

ಕೌಲಾಲಂಪುರ್: ಕೊರೊನಾವೈರಸ್‌ನಿಂದಾಗಿ ವಿಮಾನಯಾನ ಸಂಸ್ಥೆಗಳಿಗೆ ಭಾರೀ ಹೊಡೆತ ಬಿದ್ದಿದೆ. ಹಾಗಾಗಿ ಮಲೇಷ್ಯಾದ ವಿಮಾನಸಂಸ್ಥೆಮಲೇಷ್ಯಾ ಏರ್‌ಲೈನ್ಸ್ ಬೆರ್ಹಾಡ್ (ಎಂಎಬಿ) ಮತ್ತು ಬಜೆಟ್ ಏರ್‌ಲೈನ್ ಏರ್‌ಏಷ್ಯಾ ಗ್ರೂಪ್ ಬೆರ್ಹಾಡ್‌ನ್ನುವಿಲೀನ ಮಾಡುವುದೊಂದೇ ಆಯ್ಕೆ ನಮ್ಮಲ್ಲಿ ಉಳಿದಿರುವುದು ಎಂದು ಮಲೇಷ್ಯಾದ ಹಿರಿಯ ಸಚಿವರೊಬ್ಬರು ಹೇಳಿರುವುದಾಗಿ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕೋವಿಡ್-19 ಜಾಗತಿಕ ಪಿಡುಗಿನಿಂದಾಗಿ ಇಲ್ಲಿಯವರೆಗೆ ಜಗತ್ತಿನಲ್ಲಿ 143,744 ಮಂದಿ ಸಾವಿಗೀಡಾಗಿದ್ದಾರೆ. ಹಲವಾರು ರಾಷ್ಟ್ರಗಳಲ್ಲಿ ಲಾಕ್‌ಡೌನ್ ಮುಂದುವರಿದಿದ್ದು, ವಿಮಾನಯಾನ ಸಂಪೂರ್ಣ ಸ್ಥಗಿತಗೊಂಡಿದೆ.

ಈ ಬಗ್ಗೆ ಮಾತನಾಡಿದ ಮಲೇಷ್ಯಾದ ವಿದೇಶ ವ್ಯವಹಾರ ಮತ್ತು ಉದ್ಯಮ ಸಚಿವ ಮೊಹಮ್ಮದ್ ಅಜ್ಮಿನ್ ಅಲಿ, ದೇಶದ ವಿಮಾನಯಾನ ಸಂಸ್ಥೆಗಳಿಗೆ ಸಹಾಯ ಮಾಡಲು ಅಗತ್ಯವಿರುವ ಕ್ರಮಗಳನ್ನು ಶೀಘ್ರವೇ ಕೈಗೊಳ್ಳಲಾಗುವುದು ಎಂದಿದ್ದಾರೆ.ಎಂಎಬಿಯನ್ನು ಮಲೇಷ್ಯಾದ ಖಾಸಗಿ ವಿಮಾನ ಸಂಸ್ಥೆಯಾದ ಏರ್‌ಏಷ್ಯಾದೊಂದಿಗೆ ವಿಲೀನ ಮಾಡುವ ಬಗ್ಗೆ ಕಳೆದ ವರ್ಷದಲ್ಲೇ ಚಿಂತಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.

ಜಾಗತಿಕ ಪಿಡುಗುವ್ಯಾಪಿಸುವ ಮುನ್ನವೇ ಕಳೆದ ವರ್ಷ ವಿಮಾನ ಸಂಸ್ಥೆಗಳ ವಿಲೀನ ಬಗ್ಗೆ ಮಾತುಕತೆ ನಡೆಸಲಾಗಿತ್ತು, ನಾವು ಈ ಮಾತುಕತೆಯನ್ನು ಮುಂದುವರಿಸಬೇಕಿದೆ ಎಂದು ಸಂದರ್ಶನವೊಂದರಲ್ಲಿ ಮಾತನಾಡಿದ ಅಲಿ ಹೇಳಿದ್ದಾರೆ.

ಆ ವಿಮಾನ ಸಂಸ್ಥೆಗಳನ್ನು ಯಾವ ರೀತಿ ಉಳಿಸಬಹುದು ಎಂಬುದರ ಬಗ್ಗೆ ನಾವು ಯೋಚಿಸುತ್ತಿದ್ದೇವೆ.ಅದು ಅಷ್ಟು ಸುಲಭದ ಮಾತಲ್ಲ. ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ.ವಿಮಾನಗಳು ಹಾರಾಡುತ್ತಿಲ್ಲ, ಈ ಸಮಸ್ಯೆಗಳಿಗೆ ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ನಾವು ಕುಳಿತು ಚರ್ಚಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ವಿಮಾನಸಂಸ್ಥೆಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕೋವಿಡ್-19ಗಿಂತ ಮುಂಚೆಯೂ ವಿಮಾನಯಾನ ಉದ್ಯಮ ಉತ್ತಮವಾಗಿತ್ತು ಎಂದು ಹೇಳುವಂತಿರಲಿಲ್ಲ.ಕಳೆದ ವರ್ಷದಿಂದಲೇ ಎಂಎಬಿ ಜತೆ ಪಾಲುದಾರಿಕೆ ಹೊಂದಲು ವಿಮಾನಸಂಸ್ಥೆಗಳ ನಿರೀಕ್ಷೆಯಲ್ಲಿತ್ತು ಮಲೇಷ್ಯಾ ಸರ್ಕಾರ.

ಅಂತರಾಷ್ಟ್ರೀಯ ವಿಮಾನ ಸಂಸ್ಥೆಗಳ ಪ್ರಸ್ತಾಪದ ಬಗ್ಗೆಯೂ ನಾವು ನೋಡುತ್ತಿದ್ದೇವೆ. ಈ ರೋಗದಿಂದಾಗಿ ಪರಿಸ್ಥಿತಿ ಮತ್ತಷ್ಟು ಜಟಿಲವಾಗಿದೆ. ನಾವು ಎಲ್ಲ ರೀತಿಯ ಆಯ್ಕೆಗಳನ್ನು ನೋಡತ್ತಿದ್ದೇವೆ ಎಂದು ಹೇಳಿದ ಅವರು ಬೇರೆ ಯಾವ ಕಂಪನಿಯಿಂದ ಪ್ರಸ್ತಾಪ ಬಂದಿದೆ ಎಂಬದರ ಬಗ್ಗೆ ಮಾಹಿತಿ ನೀಡಿಲ್ಲ.

ಅಂದಹಾಗೆಏರ್‌ ಏಷ್ಯಾ ಮತ್ತು ಜಪಾನ್ ಏರ್‌ಲೈನ್ಸ್ ಕೋ. ಲಿಮಿಟೆಡ್, ಎಂಎಬಿ ಪಾಲು ಹೊಂದಲು ಆಸಕ್ತಿ ತೋರಿತ್ತು,

ಎಲ್ಲ ವಿಮಾನ ಸೇವೆ ರದ್ದಾಗಿರುವ ಕಾರಣ ಕಳೆದ ವಾರ ಯಾವುದೇ ಆದಾಯ ಇರಲಿಲ್ಲ ಎಂದು ಏರ್ ಏಷ್ಯಾ ಹೇಳಿದೆ.

ಏಪ್ರಿಲ್ 29ಕ್ಕೆ ಮಲೇಷ್ಯಾ, ಮೇ.1ರಿಂದ ಥಾಯ್ಲೆಡ್ ಮತ್ತು ಫಿಲಿಪ್ಪೇನ್ಸ್, ಮೇ 4ರಂದು ಭಾರತ ಮತ್ತು ಮೇ.7ರಂದು ಇಂಡೋನೇಷ್ಯಾಕ್ಕೆ ವಿಮಾನ ಸಂಚಾರ ಆರಂಭಿಸಲಿದ್ದೇವೆ ಎಂದು ಏರ್ ಏಷ್ಯಾ ಹೇಳಿದೆ. ಇದಕ್ಕಾಗಿ ಸರ್ಕಾರದ ಅನುಮತಿಗೆ ಕಾಯಬೇಕಿದೆ.

ಮಾರ್ಚ್ 18-ಏಪ್ರಿಲ್ 28ರವರೆಗೆ ಮಲೇಷ್ಯಾದಲ್ಲಿ ಭಾಗಶಃ ಲಾಕ್‌ಡೌನ್ ಮಾಡಲಾಗಿದೆ.ಇಲ್ಲಿಯವರೆಗೆ 5,182 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 84 ಮಂದಿ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT