ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಝೂಂ ಜತೆ ಏರ್‌ಟೆಲ್‌ ಒಪ್ಪಂದ

Last Updated 6 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಮೊಬೈಲ್‌ ಸೇವಾ ಸಂಸ್ಥೆ ಏರ್‌ಟೆಲ್‌, ಝೂಂ ವಿಡಿಯೊ ಕಮ್ಯುನಿಕೇಷನ್ಸ್‌ ಸಹಯೋಗದಲ್ಲಿ ಕಾರ್ಪೊರೇಟ್‌ಗಳ ಬಳಕೆ ಉದ್ದೇಶಕ್ಕೆ ದೇಶದ ಮೊದಲ ಗರಿಷ್ಠ ಗುಣಮಟ್ಟದ ಯುನೈಫೈಡ್‌ ಕಮ್ಯುನಿಕೇಷನ್ಸ್‌ ಸೊಲುಷನ್ಸ್‌ ಆರಂಭಿಸಿದೆ.

ಈ ಸೌಲಭ್ಯದ ನೆರವಿನಿಂದ ಕಂಪನಿಗಳು ತಮ್ಮ ಉದ್ಯೋಗಿಗಳು ಮತ್ತು ವಿವಿಧ ತಂಡಗಳ ಜತೆ ವಿವಿಧ ಸಂಪರ್ಕ ಸಾಧನಗಳ ಮೂಲಕ ವಿಶ್ವದ ಯಾವುದೇ ಮೂಲೆಯಿಂದ ಗರಿಷ್ಠ ಸ್ಪಷ್ಟತೆಯ ವಿಡಿಯೊ, ಆಡಿಯೊ ಸಂವಹನ ಮತ್ತು ವೆಬ್‌ ಕಾನ್ಫರೆನ್ಸ್‌ ನಡೆಸಬಹುದು. ಈ ಸೇವೆಗಾಗಿಯೇ ದಿನದ 24 ಗಂಟೆಗಳ ಕಾಲ್‌ ಸೆಂಟರ್‌ ಕಾರ್ಯನಿರ್ವಹಿಸಲಿದೆ ಎಂದು ಸಂಸ್ಥೆ ತಿಳಿಸಿದೆ.

ಡುಂಜೊದಲ್ಲಿ ರೆಡ್‍ಮಿ ನೋಟ್ 7 ಲಭ್ಯ

ಬೆಂಗಳೂರು: ಬೆಂಗಳೂರಿನ ಸ್ಥಳೀಯ ವಿತರಣಾ ಸೇವಾ ಸಂಸ್ಥೆಯಾಗಿರುವ ಡುಂಜೊದಲ್ಲಿ (dunzo) ರೆಡ್‍ಮಿ ನೋಟ್ 7 ಲಭ್ಯವಾಗುತ್ತಿದೆ.

ಡುಂಜೊ ಆ್ಯಪ್‍ನಲ್ಲಿ ಈ ಫೋನ್‌ ಖರೀದಿಸುವ ಗ್ರಾಹಕರಿಗೆ ಅದೇ ದಿನ ಮನೆ ಬಾಗಿಲಿಗೆ ತಲುಪಲಿದೆ. ಸ್ಮಾರ್ಟ್‍ಫೋನ್ ಮತ್ತು ಸ್ಮಾರ್ಟ್ ಟಿವಿ ಬ್ರ್ಯಾಂಡ್ ಆಗಿರುವ ಜಿಯೋಮಿಯ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಲು ಡುಂಜೊ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT