ನವದೆಹಲಿ (ಪಿಟಿಐ): ಪಶ್ಚಿಮ ಏಷ್ಯಾದ ಸಂಘರ್ಷದಿಂದ ಕ್ಯಾನ್ ಮತ್ತು ಬಾಟಲಿಗಳ ಪೂರೈಕೆಯಲ್ಲಿ ಅಡಚಣೆ ಉಂಟಾಗಿದ್ದು, ಇವುಗಳ ಬೆಲೆ ಏರಿಕೆಯಾಗಿದೆ. ಹೀಗಾಗಿ, ದರ ಏರಿಕೆಯನ್ನು ನಿಭಾಯಿಸಲು ಮದ್ಯದ ಬೆಲೆ ಹೆಚ್ಚಿಸುವಂತೆ ಮದ್ಯ ತಯಾರಕ ಒಕ್ಕೂಟ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದೆ.

ಭಾರತೀಯ ಮದ್ಯ ತಯಾರಿಕಾ ಕಂಪನಿಗಳ ಒಕ್ಕೂಟ (ಸಿಐಎಬಿಸಿ) ಮತ್ತು ಭಾರತೀಯ ಮದ್ಯ ತಯಾರಕರ ಸಂಘವು (ಬಿಎಐ) ದೇಶದಲ್ಲಿ ತಯಾರಾದ ವಿದೇಶಿ ಮದ್ಯದ (ಐಎಂಎಫ್ಎಲ್) ದರವನ್ನು (ವೈನ್ ಮತ್ತು ಬಿಯರ್) ಪರಿಷ್ಕರಣೆ ಮಾಡಲು ಅನುಮತಿ ನೀಡುವಂತೆ ಒತ್ತಾಯಿಸಿದೆ. ಇದು ಹೆಚ್ಚುತ್ತಿರುವ ತಯಾರಿಕಾ ವೆಚ್ಚವನ್ನು ನಿಭಾಯಿಸಲು ತಯಾರಕರಿಗೆ ಸಹಾಯ ಮಾಡಲಿದೆ ಎಂದು ಹೇಳಿವೆ.

‘ಸಂಘರ್ಷದಿಂದ ವಿವಿಧ ಉತ್ಪನ್ನಗಳ ಬೆಲೆಯಲ್ಲಿ ತ್ವರಿತ ಏರಿಕೆಯಾಗಿದೆ. ಇದಕ್ಕಾಗಿ ಶೇ 15ರಿಂದ ಶೇ 20ರಷ್ಟು ಬೆಲೆ ಹೆಚ್ಚಿಸಲು ಅವಕಾಶ ನೀಡುವಂತೆ’ ಭಾರತೀಯ ಮದ್ಯ ತಯಾರಕರ ಒಕ್ಕೂಟದ ಪ್ರಧಾನ ನಿರ್ದೇಶಕ ವಿನೋದ್ ಗಿರಿ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದ್ದಾರೆ.

ಗಾಜಿನ ಬಾಟಲಿಗಳ ದರ ಶೇ 20ರಷ್ಟು, ಪೇಪರ್ ಕಾರ್ಟೂನ್ ಬೆಲೆ ಶೇ 100ರಷ್ಟು ಸೇರಿದಂತೆ ವಿವಿಧ ಸರಕುಗಳ ಬೆಲೆಯಲ್ಲಿ ಭಾರಿ ಹೆಚ್ಚಳವಾಗಿದೆ ಎಂದು ಗಿರಿ ತಿಳಿಸಿದ್ದಾರೆ.

ವಾಣಿಜ್ಯ ಬಳಕೆಯ ಎಲ್ಎನ್ಜಿ ಪೂರೈಕೆಯಲ್ಲಿನ ತೀವ್ರ ಅಡಚಣೆಯಿಂದ ಗಾಜು ತಯಾರಕರು ಒತ್ತಡದಲ್ಲಿ ಸಿಲುಕಿದ್ದಾರೆ. ಇದರಿಂದ ಭಾಗಶಃ ಅಥವಾ ಪೂರ್ಣ ಪ್ರಮಾಣದಲ್ಲಿ ಘಟಕಗಳನ್ನು ಸ್ಥಗಿತಗೊಳಿಸಲು ಮುಂದಾಗುತ್ತಿದ್ದಾರೆ. ಮುಂಬರುವ ತಿಂಗಳಿನಲ್ಲಿ ಕ್ಯಾನ್ಗಳ ಪೂರೈಕೆಯಲ್ಲಿ ತೀವ್ರ ತೊಂದರೆ ಉಂಟಾಗಬಹುದು ಎಂದು ಬಿಎಐ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-51-722472885

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.