ಅಲಿಬಾಬಾ ಅಧ್ಯಕ್ಷ 2019ರಲ್ಲಿ ನಿವೃತ್ತಿ

7

ಅಲಿಬಾಬಾ ಅಧ್ಯಕ್ಷ 2019ರಲ್ಲಿ ನಿವೃತ್ತಿ

Published:
Updated:

ಬೀಜಿಂಗ್‌ : ವಿಶ್ವದ ಸಿರಿವಂತರಲ್ಲಿ ಒಬ್ಬರಾಗಿರುವ ಅಲಿಬಾಬಾ ಸಂಸ್ಥೆಯ ಮುಖ್ಯಸ್ಥ ಜಾಕ್‌ ಮಾ ಅವರು, 2019ರಲ್ಲಿ ನಿವೃತ್ತಿಯಾಗುವುದಾಗಿ ಹೇಳಿದ್ದಾರೆ.

ಸೋಮವಾರ ನಡೆದ ತಮ್ಮ 54ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ನಿವೃತ್ತಿ ದಿನವನ್ನು ಘೋಷಿಸಿದರು. ಜತೆಗೆ ಸಂಸ್ಥೆಯ ಸಿಇಒ ಡೇನಿಯಲ್‌ ಝಾಂಗ್‌ ಅವರು ತಮ್ಮ ಉತ್ತರಾಧಿಕಾರಿಯಾಗಲಿದ್ದಾರೆ ಎನ್ನುವುದನ್ನೂ ಬಹಿರಂಗಪಡಿಸಿ
ದ್ದಾರೆ. ಇದರಿಂದಾಗಿ, ಸೋಮವಾರವೇ ಅವರು ನಿವೃತ್ತಿ ಘೋಷಿಸಲಿದ್ದಾರೆ ಎನ್ನುವ ಸುದ್ದಿಗೆ ತೆರೆ ಬಿದ್ದಿತು.

2019ರ ಸೆಪ್ಟೆಂಬರ್‌ 10ರಂದು ಝಾಂಗ್‌ ಅವರು ಕಾರ್ಯನಿರ್ವಾಹಕ ನಿರ್ದೇಶಕ ಹುದ್ದೆಗೆ ಬಡ್ತಿ ಪಡೆಯಲಿದ್ದಾರೆ.

ಮಾ ಅವರು ಆಡಳಿತ ಮಂಡಳಿಯ ನಿರ್ದೇಶಕರಾಗಿ ಮತ್ತು ಅಲಿಬಾಬಾ ಪಾಲುದಾರಿಕೆಯ ಶಾಶ್ವತ ಸದಸ್ಯರಾಗಿ ಮುಂದುವರಿಯಲಿದ್ದಾರೆ. ಮಾ ಅವರು ಸಂಸ್ಥೆಯ ಸಿಬ್ಬಂದಿಗೆ ಬರೆದಿರುವ ಪತ್ರದಲ್ಲಿ ಈ ಮಾಹಿತಿ ಇದೆ.

ಅಧಿಕಾರ ಹಸ್ತಾಂತರ ಪ್ರಕ್ರಿಯೆ ಸುಗಮಗೊಳಿಸುವ ಉದ್ದೇಶದಿಂದ ಮಾ ಅವರು ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮುಂದುವರಿಯಲಿದ್ದಾರೆ.

2020ರಲ್ಲಿ ನಡೆಯುವ ಷೇರುದಾರರ ಸಭೆಯವರೆಗೂ ಅವರು ನಿರ್ದೇಶಕರಾಗಿ ಮುಂದುವರೆಯಲಿದ್ದಾರೆ ಎಂದು ಅಲಿಬಾಬಾ ಮಾಲೀಕತ್ವದ ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ಪತ್ರಿಕೆ ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !