ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

30 ನಿಮಿಷಗಳಲ್ಲಿ ₹71,362 ಕೋಟಿ ಮೌಲ್ಯದ ವಹಿವಾಟು ನಡೆಸಿದ ಅಲಿಬಾಬಾ

11.11 ಶಾಪಿಂಗ್‌ ಫೆಸ್ಟಿವಲ್‌
Last Updated 11 ನವೆಂಬರ್ 2019, 6:11 IST
ಅಕ್ಷರ ಗಾತ್ರ

ಹಾಂಗ್‌ಝೋವ್:ಚೀನಾದ ಪ್ರಮುಖ ಇ–ಕಾಮರ್ಸ್‌ ಸಂಸ್ಥೆ ಅಲಿಬಾಬಾ ಕೇವಲ 30 ನಿಮಿಷಗಳಲ್ಲಿ ದಾಖಲೆ ವಹಿವಾಟಿಗೆ ವೇದಿಕೆಯಾಗುವ ಮೂಲಕ ಮತ್ತೆ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದೆ.

ಸೋಮವಾರ '11.11'(ನವೆಂಬರ್‌ 11) ಜಾಗತಿಕ ಶಾಪಿಂಗ್‌ ಫೆಸ್ಟಿವಲ್‌ ಆರಂಭಿಸಿರುವ ಅಲಿಬಾಬಾ, ಮೊದಲ 29 ನಿಮಿಷ 45 ಸೆಕೆಂಡ್‌ಗಳಲ್ಲಿ ₹71,362 ಕೋಟಿ(10 ಬಿಲಿಯನ್‌ ಡಾಲರ್‌) ಮೊತ್ತದ ಸರಕುಗಳು ಮಾರಾಟಗೊಂಡಿವೆ. ವಹಿವಾಟು ಆರಂಭಗೊಂಡ 1 ನಿಮಿಷ 8 ಸೆಕೆಂಡ್‌ಗಳಲ್ಲೇ ₹7,136 ಕೋಟಿ (1 ಬಿಲಿಯನ್‌ ಡಾಲರ್‌) ಮೊತ್ತದ ಸರಕು ಮಾರಾಟಗೊಂಡಿವೆ.

ಮೊದಲ ಎರಡು ಗಂಟೆಗಳಲ್ಲಿ ಒಟ್ಟು ಮಾರಾಟ ಸರಕು ಮೌಲ್ಯ ₹1.23 ಲಕ್ಷ ಕೋಟಿ(17.24 ಬಿಲಿಯನ್‌ ಡಾಲರ್‌) ತಲುಪಿದೆ. ಇದು 2016ರ 11.11 ಶಾಪಿಂಗ್‌ ಫೆಸ್ಟಿವಲ್‌ನ ಒಟ್ಟು ಮಾರಾಟ ಮೌಲ್ಯವನ್ನು ಮೀರಿದೆ. ಜಪಾನ್‌, ಅಮೆರಿಕ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ಜರ್ಮನಿ, ಇಂಗ್ಲೆಂಡ್‌ ಹಾಗೂ ಫ್ರಾನ್ಸ್‌ನಿಂದಲೂ ಚೀನಾಗೆ ಸರಕು ಮಾರಾಟಗೊಂಡಿವೆ.

[object Object]

ಅಲಿಬಾಬಾ ಪ್ರಕಾರ, ಈ ಬಾರಿಯ ಫೆಸ್ಟಿವಲ್‌ನಲ್ಲಿ ಪ್ರತಿ ಸೆಕೆಂಡ್‌ಗೆ 5,44,000 ಆರ್ಡರ್‌ಗಳು ದಾಖಲಾಗಿವೆ. 2009ರಲ್ಲಿ ಇಂಥದ್ದೇ ಮಾರಾಟ ಹಬ್ಬದ ದಿನವನ್ನು ಪ್ರಾರಂಭಿಸಿದಾಗ ನಡೆದಿದ್ದ ಖರೀದಿಗಿಂತಲೂ 1,360 ಪಟ್ಟು ಹೆಚ್ಚು ವಹಿವಾಟು ನಡೆದಿದೆ.

'ಡಬಲ್‌ 11' ಹಾಗೂ 'ಸಿಂಗಲ್ಸ್‌ ಡೇ' ಎಂದೂ ಕರೆಯಲಾಗುತ್ತಿರುವ ಈ ಶಾಪಿಂಗ್‌ ಫೆಸ್ಟಿವಲ್‌ ಇಂದು ಮಧ್ಯರಾತ್ರಿ ಕೊನೆಗೊಳ್ಳಲಿದೆ. 78 ರಾಷ್ಟ್ರಗಳ ಎರಡು ಲಕ್ಷಕ್ಕೂ ಅಧಿಕ ಬ್ರ್ಯಾಂಡ್‌ಗಳು, 10 ಲಕ್ಷಕ್ಕೂ ಅಧಿಕ ಹೊಸ ಉತ್ಪನ್ನಗಳು ಕೊಡುಗೆಗೆಗಳೊಂದಿಗೆ ಮಾರಾಟಕ್ಕೆ ತೆರೆದುಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT