ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣಿಕ ವಾಹನ ಮಾರಾಟ: ಮಾರುತಿ ಸುಜುಕಿ ಮುಂಚೂಣಿ

Last Updated 24 ಮಾರ್ಚ್ 2019, 17:56 IST
ಅಕ್ಷರ ಗಾತ್ರ

ನವದೆಹಲಿ: ಮಾರುತಿ ಸುಜುಕಿ ಇಂಡಿಯಾದ ಸಣ್ಣ ಕಾರ್‌ ಆಲ್ಟೊ, ಫೆಬ್ರುವರಿ ತಿಂಗಳಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಮಾರಾಟವಾಗಿದೆ.

ಭಾರತದ ವಾಹನ ತಯಾರಕರ ಸಂಘ (ಎಸ್‌ಐಎಂ) ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, 24,751 ಆಲ್ಟೊಗಳು ಮಾರಾಟವಾಗಿವೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 19,941 ಆಲ್ಟೊ ಮಾರಾಟವಾಗಿದ್ದವು.

ಮಾರಾಟವಾಗಿರುವ ಪ್ರಯಾಣಿಕರ ವಾಹನ ತಯಾರಿಕಾ ಸಂಸ್ಥೆಗಳ ಪೈಕಿ ‘ಎಂಎಸ್‌ಐ’ ಮುಂಚೂಣಿ ಸ್ಥಾನದಲ್ಲಿ ಇದೆ. ಸಂಸ್ಥೆಯ ವಿಭಿನ್ನ ಮಾದರಿಯ ಕಾರುಗಳು ಮೊದಲ 6 ಸ್ಥಾನಗಳಲ್ಲಿ ಇವೆ.

ಸ್ವಿಫ್ಟ್‌ (18,224), ಬಲೆನೊ (17,944), ಡಿಸೈರ್‌ (15,915), ಹೊಸ ವ್ಯಾಗನ್‌ಆರ್‌ (15,661), ಕಾಂಪ್ಯಾಕ್ಟ್‌ ಎಸ್‌ಯುವಿ ವಿತಾರಾ ಬ್ರೀಜಾ (11,613) ಮುಂಚೂಣಿಯಲ್ಲಿ ಇವೆ.

ಹುಂಡೈ: ನಂತರದ ಮೂರು ಸ್ಥಾನದಲ್ಲಿ ಹುಂಡೈನ ಎಲೈಟ್‌ ಐ20 (11,547), ಜನಪ್ರಿಯ ಎಸ್‌ಯುವಿ ಕ್ರೇಟಾ (10,206) ಮತ್ತು ಕಾಂಪ್ಯಾಕ್ಟ್‌ ಕಾರ್‌ ಗ್ರ್ಯಾಂಡ್‌ ಐ10 (9,065) ಇವೆ.

ಟಾಟಾ ಮೋಟರ್ಸ್‌ನ ಟಿಯಾಗೊ (8,001) 10ನೆ ಸ್ಥಾನದಲ್ಲಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT