ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆಜಾನ್‌: 27ಕ್ಕೆ ಸಣ್ಣ ಉದ್ದಿಮೆ ದಿನ

Last Updated 21 ಜೂನ್ 2020, 15:42 IST
ಅಕ್ಷರ ಗಾತ್ರ

ನವದೆಹಲಿ: ಸಣ್ಣ ಉದ್ದಿಮೆಗಳಿಗೆ ನೆರವು ಕಲ್ಪಿಸಲು ಇ–ಕಾಮರ್ಸ್‌ ದೈತ್ಯ ಸಂಸ್ಥೆ ಅಮೆಜಾನ್‌, ಇದೇ 27ರಂದು ಸಣ್ಣ ಉದ್ದಿಮೆ ದಿನ ಆಚರಿಸಲಿದೆ.

ಕೋವಿಡ್‌ನಿಂದಾಗಿರುವ ವಹಿವಾಟು ನಷ್ಟದಿಂದ ಹೊರಬರಲು ಈ ಕಾರ್ಯಕ್ರಮವು ಸಣ್ಣ ಉದ್ದಿಮೆದಾರರಿಗೆ ಅವಕಾಶ ಒದಗಿಸಲಿದೆ ಎಂದು ಕಂಪನಿ ತಿಳಿಸಿದೆ.

ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್ಎಂಇ) ದಿನದ ಆಚರಣೆ ಸಂದರ್ಭದಲ್ಲಿ ಸಣ್ಣ ಉದ್ದಿಮೆದಾರರು, ಕುಶಲಕರ್ಮಿಗಳು, ನೇಕಾರರು ಮತ್ತು ನವೋದ್ಯಮಗಳ ಉತ್ಪನ್ನಗಳ ಮಾರಾಟಕ್ಕೆ ವಿಶೇಷ ಅವಕಾಶ ಕಲ್ಪಿಸಿಕೊಡಲಾಗುವುದು.

ಸಂಸ್ಥೆಯ ಕಾರ್ಯಕ್ರಮಗಳಾದ ಲೋಕಲ್‌ ಶಾಪ್ಸ್‌, ಅಮೆಜಾನ್‌ ಲಾಂಚ್‌ಪ್ಯಾಡ್‌, ಸಹೇಲಿ ಮತ್ತು ಕಾರಿಗಾರ್‌ ಮೂಲಕ ಗ್ರಾಹಕರಿಗೆ ವಿಶಿಷ್ಟ ಉತ್ಪನ್ನಗಳನ್ನು ಖರೀದಿಸುವ ಅವಕಾಶ ಒದಗಿಸಿಕೊಡಲಿದೆ.

ಕರಕುಶಲ ವಸ್ತುಗಳು, ಪಾದರಕ್ಷೆಗಳು, ಅಡುಗೆ ಮನೆ ಪರಿಕರ, ಫ್ಯಾಷನ್‌ ವಸ್ತ್ರಗಳು ‘ಇಂಡಿಯಾ ಬಜಾರ್‌’, ಬಜೆಟ್‌ ಬಾಯ್ಸ್‌ ಮತ್ತು ಬೆಸ್ಟ್‌ಸೆಲ್ಲರ್‌ ಮಳಿಗೆಗಳಲ್ಲಿ ಲಭ್ಯ ಇರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT