ಭಾನುವಾರ, ಜನವರಿ 24, 2021
19 °C

ಜೆಇಇ ಪರೀಕ್ಷಾರ್ಥಿಗಳಿಗೆ ಅಮೆಜಾನ್‌ನಿಂದ ಆನ್‌ಲೈನ್‌ ತರಗತಿ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜೆಇಇ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ತರಬೇತಿ ಒದಗಿಸುವ ಉದ್ದೇಶದಿಂದ ಅಮೆಜಾನ್‌ ಕಂಪನಿಯು ಆನ್‌ಲೈನ್‌ ಅಕಾಡೆಮಿಯನ್ನು ಆರಂಭಿಸಿದೆ.

‘ಅಮೆಜಾನ್ ಅಕಾಡೆಮಿ’ ಎಂದು ಇದಕ್ಕೆ ಹೆಸರಿಡಲಾಗಿದೆ. ಇದು ವೆಬ್‌ಸೈಟ್‌ ರೂಪದಲ್ಲಿ ಹಾಗೂ ಆ್ಯಂಡ್ರಾಯ್ಡ್‌ ಆ್ಯಪ್‌ ರೂಪದಲ್ಲಿ ದೊರೆಯಲಿದೆ. ನೇರ ಪ್ರಸಾರದ ಉಪನ್ಯಾಸಗಳು, ಕಲಿಕಾ ಸಾಮಗ್ರಿಗಳು ವಿದ್ಯಾರ್ಥಿಗಳಿಗೆ ಲಭ್ಯವಾಗಲಿವೆ. ಈ ವೇದಿಕೆಯಲ್ಲಿನ ಪಾಠಗಳು ಈಗ ಉಚಿತವಾಗಿ ಲಭ್ಯವಿದ್ದು, ಮುಂದಿನ ಕೆಲವು ತಿಂಗಳುಗಳ ಕಾಲ ಉಚಿತವಾಗಿಯೇ ಇರಲಿವೆ ಎಂದು ಅಮೆಜಾನ್‌ ಪ್ರಕಟಣೆ ತಿಳಿಸಿದೆ.

ಎಂಜಿನಿಯರಿಂಗ್‌ ಕಾಲೇಜುಗಳಿಗೆ ಪ್ರವೇಶ ಕಲ್ಪಿಸುವ ಜೆಇಇ ಪರೀಕ್ಷೆಗೆ ಪ್ರತಿವರ್ಷ ಸರಿಸುಮಾರು 20 ಲಕ್ಷ ವಿದ್ಯಾರ್ಥಿಗಳು ಹಾಜರಾಗುತ್ತಾರೆ. ಈ ಪರೀಕ್ಷೆಗೆ ಹಾಜರಾಗುವ ಕೆಲವರು ಖಾಸಗಿಯಾಗಿ ಟ್ಯೂಷನ್ ತರಗತಿಗಳಿಗೆ ಹಾಜರಾಗುವುದೂ ಇದೆ. ಕೋವಿಡ್–19 ಸಾಂಕ್ರಾಮಿಕದ ಕಾರಣದಿಂದಾಗಿ ಕೆಲವು ಟ್ಯೂಷನ್ ತರಗತಿಗಳು ಆನ್‌ಲೈನ್‌ ಮೂಲಕ ನಡೆಯುತ್ತಿವೆ, ಇನ್ನು ಕೆಲವು ತರಗತಿಗಳ ಬಾಗಿಲು ಮುಚ್ಚಿವೆ.

ಮೊಬೈಲ್‌ಗೆ ಪ್ರತ್ಯೇಕ ಕೊಡುಗೆ

ನವದೆಹಲಿ: ಅಮೆಜಾನ್‌, ತನ್ನ ಪ್ರೈಮ್‌ ವಿಡಿಯೊ ವೀಕ್ಷಣೆಗೆ ಹೊಸ ಕೊಡುಗೆಯೊಂದನ್ನು ಪ್ರಕಟಿಸಿದೆ. ತಿಂಗಳಿಗೆ ₹ 89 ಪಾವತಿಸಿದರೆ ಲಭ್ಯವಾಗುವ ಪ್ಲ್ಯಾನ್ ಇದಾಗಿದ್ದು, ಪ್ರೈಮ್‌ ವಿಡಿಯೊಗಳನ್ನು ಸ್ಮಾರ್ಟ್‌ಫೋನ್‌ ಮೂಲಕ ಮಾತ್ರ ವೀಕ್ಷಿಸಲು ಇದು ಅವಕಾಶ ಕಲ್ಪಿಸುತ್ತದೆ.

ಒಮ್ಮೆಗೆ, ಒಬ್ಬರು ಮಾತ್ರ ಬಳಸಲು ಅವಕಾಶ ಇರುವ ಈ ಪ್ಲ್ಯಾನ್‌ ಆರಂಭಿಕ ಹಂತದಲ್ಲಿ ಏರ್‌ಟೆಲ್‌ನ ಪ್ರೀಪೇಯ್ಡ್‌ ಗ್ರಾಹಕರಿಗೆ ದೊರೆಯಲಿದೆ ಎಂದು ಕಂಪನಿ ಹೇಳಿದೆ. ಅಮೆಜಾನ್‌ ಕಂಪನಿಯು ಮೊಬೈಲ್‌ಗೆ ಮಾತ್ರ ಅನ್ವಯವಾಗುವ ಪ್ಲ್ಯಾನ್‌ಅನ್ನು ಆರಂಭಿಸಿರುವುದು ಭಾರತದಲ್ಲಿ ಮಾತ್ರ.

ಅಮೆಜಾನ್‌ ಪ್ರೈಮ್‌ ವಿಡಿಯೊದ ಪ್ರತಿಸ್ಫರ್ಧಿ ಆಗಿರುವ ನೆಟ್‌ಫ್ಲಿಕ್ಸ್‌, ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರ ಅನ್ವಯವಾಗುವ ಪ್ಲ್ಯಾನ್‌ ಜಾರಿಗೆ ತಂದಿದೆ. ತಿಂಗಳಿಗೆ ₹ 199 ಪಾವತಿಸಿ ಸ್ಮಾರ್ಟ್‌ಫೋನ್‌ನಲ್ಲಿ ನೆಟ್‌ಫ್ಲಿಕ್ಸ್‌ನ ಕಾರ್ಯಕ್ರಮಗಳನ್ನು, ವೆಬ್ ಸರಣಿಗಳನ್ನು ವೀಕ್ಷಿಸಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು