ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ಅಲ್ಪಸಂಖ್ಯಾತರಿಗಾಗಿ ಪ್ರೈಡ್ ಮಾಸ: ಅಮೆಜಾನ್ ಇಂಡಿಯಾದಿಂದ ಟೇಪ್‌ ವಿನ್ಯಾಸ

ಅಕ್ಷರ ಗಾತ್ರ

ಬೆಂಗಳೂರು: ಲೈಂಗಿಕ ಅಲ್ಪಸಂಖ್ಯಾತರೆಂದು ಗುರುತಿಸಿಕೊಳ್ಳುವ ಎಲ್ಲ ಸಮುದಾಯದವರ (ಎಲ್‌ಜಿಬಿಟಿಕ್ಯುಎ+) ದನಿಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಜೂನ್‌ ಇಡೀ ತಿಂಗಳು 'ಪ್ರೈಡ್‌ ಮಾಸ' (Pride month) ಎಂದು ಆಚರಿಸಲಾಗುತ್ತದೆ. ಭಿನ್ನ ಲೈಂಗಿಕ ಅಭಿವ್ಯಕ್ತಿಯನ್ನು ಸಂಭ್ರಮಿಸುವ ನಿಟ್ಟಿನಲ್ಲಿ ಈ ವರ್ಷ ಅಮೆಜಾನ್‌ ಇಂಡಿಯಾ ವಿಶೇಷವಾಗಿ ಲಿಮಿಟೆಡ್‌ ಎಡಿಷನ್‌ 'ಟೇಪ್‌' ವಿನ್ಯಾಸಗೊಳಿಸಿದೆ. ಮನೆಗಳಿಗೆ ತಲುಪುವ ಆರ್ಡರ್‌ ಬಾಕ್ಸ್‌ಗಳು ಆ ಟೇಪ್‌ನ ಸೀಲ್‌ ಹೊಂದಿರಲಿವೆ.

ಈ ತಿಂಗಳು ಪೂರ್ತಿ ದೆಹಲಿ, ಮುಂಬೈ ಹಾಗೂ ಬೆಂಗಳೂರಿನ ಸಂಗ್ರಹಾಗಾರಗಳಿಂದ ಅಮೆಜಾನ್‌ ಬಾಕ್ಸ್‌ಗಳು 11 ಬಣ್ಣಗಳಿರುವ ಪ್ರೈಡ್‌ ಬಾವುಟವನ್ನು ಒಳಗೊಂಡ ವಿಶೇಷ ಟೇಪ್‌ ಜೊತೆಗೆ ಬರಲಿವೆ.

ಎಲ್‌ಜಿಬಿಟಿಕ್ಯುಎ+ ಸಮುದಾಯದಲ್ಲಿ ಗುರುತಿಸಿಕೊಂಡವರು ಕಂಪನಿಯ ಎಲ್ಲ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗಾಗಿ ಆರೋಗ್ಯ ವಿಮೆ, ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಅವಕಾಶಗಳನ್ನು ಅಮೆಜಾನ್‌ ಒದಗಿಸುತ್ತಿದೆ. ಭಿನ್ನ ಲೈಂಗಿಕತೆಯನ್ನು ಮುಕ್ತವಾಗಿ ಹೇಳಿಕೊಳ್ಳುವುದು, ಸ್ನೇಹಿತರು, ಕುಟುಂಬದವರು ಹಾಗೂ ಕೆಲಸದ ಸ್ಥಳಗಳಲ್ಲಿ ಅಭಿವ್ಯಕ್ತಿ ಪಡಿಸುವುದರ ಸಂಬಂಧ ಸಲಹೆ ಪಡೆಯು ವ್ಯವಸ್ಥೆಯನ್ನೂ ಕಂಪನಿ ಮಾಡಿದೆ.

ಅಮೆಜಾನ್‌ನಲ್ಲಿ ಎಲ್‌ಜಿಬಿಟಿಕ್ಯುಎ+ ಸಮುದಾಯದವರಿಗಾಗಿಯೇ ಗ್ಲ್ಯಾಮೆಜಾನ್‌ ( Glamazon) ತಂಡವನ್ನು ರೂಪಿಸಲಾಗಿದೆ. ಜಗತ್ತಿನಾದ್ಯಂತ ಅಮೆಜಾನ್‌ 200 ಗ್ಲ್ಯಾಮೆಜಾನ್‌ ಗುಂಪುಗಳನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT