ಬೆಂಗಳೂರು: ‘ಅಮೆಜಾನ್ ನೌ’ ಕಾರ್ಯಾಚರಣೆಗೆ ನೆರವಾಗಲು ದೇಶದಾದ್ಯಂತ 2028ರ ವೇಳೆಗೆ 1 ಸಾವಿರ ವೋಲ್ವೋ ಐಷರ್ ವಿದ್ಯುತ್ ಚಾಲಿತ (ಇ.ವಿ) ಟ್ರಕ್ಗಳನ್ನು ನಿಯೋಜಿಸಲು ನಿರ್ಧರಿಸಲಾಗಿದೆ. ಈ ಪೈಕಿ ಈಗಾಗಲೇ 50 ವಾಹನಗಳು ಕಾರ್ಯಾಚರಿಸುತ್ತಿವೆ ಎಂದು ಅಮೆಜಾನ್ ಇಂಡಿಯಾ ತಿಳಿಸಿದೆ.

ಈ ಟ್ರಕ್ಗಳು ಕಂಪನಿಯ ಸರಕುಗಳ ದಾಸ್ತಾನು ಮಳಿಗೆಗಳ (ಡಾರ್ಕ್ಸ್ಟೋರ್) ನಡುವೆ ಸಂಚರಿಸಲಿದ್ದು, ತ್ವರಿತವಾಗಿ ಗ್ರಾಹಕರಿಗೆ ಸರಕುಗಳನ್ನು ಪೂರೈಸಲು ನೆರವಾಗಲಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ಸೋಮವಾರ ತಿಳಿಸಿದೆ.

ದೆಹಲಿ–ಎನ್ಸಿಆರ್, ಬೆಂಗಳೂರು ಮತ್ತು ಮುಂಬೈನಲ್ಲಿ ಆರಂಭಿಕವಾಗಿ ಈ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದೆ. ದೇಶದ 100 ನಗರಗಳಲ್ಲಿ ಕ್ವಿಕ್ ಕಾಮರ್ಸ್ ಸೇವೆಯನ್ನು ವಿಸ್ತರಿಸಲಾಗುವುದು ಎಂದು ಕಂಪನಿ ಇತ್ತೀಚೆಗೆ ತಿಳಿಸಿತ್ತು. ಇದರ ಭಾಗವಾಗಿ ಈ ಘೋಷಣೆಯನ್ನು ಕಂಪನಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.