ಭಾನುವಾರ, ಸೆಪ್ಟೆಂಬರ್ 19, 2021
24 °C

ಇ–ಕಾಮರ್ಸ್‌ ರಫ್ತು ವಹಿವಾಟು ಗುರಿ₹ 35 ಸಾವಿರ ಕೋಟಿ: ಅಮೆಜಾನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಜಾಗತಿಕ ಮಾರಾಟ ಕಾರ್ಯಕ್ರಮ ಹೊಸ ಮೈಲುಗಲ್ಲು ಸೃಷ್ಟಿಸಿದೆ. ನಾಲ್ಕು ವರ್ಷಗಳಲ್ಲಿ ಇ–ಕಾಮರ್ಸ್‌ ರಫ್ತು ₹ 7 ಸಾವಿರ ಕೋಟಿಯನ್ನೂ ಮೀರಿದೆ’ ಎಂದು ಅಮೆಜಾನ್‌ ಇಂಡಿಯಾದ ಹಿರಿಯ ಉಪಾಧ್ಯಕ್ಷ ಅಮಿತ್‌ ಅಗರ್‌ವಾಲ್‌ ತಿಳಿಸಿದ್ದಾರೆ.

‘2023ರ ವೇಳೆಗೆ ₹ 35 ಸಾವಿರ ಕೋಟಿ ಮೌಲ್ಯದ ರಫ್ತು ವಹಿವಾಟು ಗುರಿ ಹೊಂದಲಾಗಿದೆ’ ಎಂದು ಹೇಳಿದ್ದಾರೆ.

‘ಭಾರತದ ಮಾರಾಟಗಾರರನ್ನು ಜಾಗತಿಕ ಮಾರುಕಟ್ಟೆಗೆ ಕರೆದೊಯ್ಯುವ ಉದ್ದೇಶದಿಂದ 2015ರಲ್ಲಿ ಜಾಗತಿಕ ಮಾರಾಟ ಕಾರ್ಯಕ್ರಮಕ್ಕೆ (ಗ್ಲೋಬಲ್‌ ಸೆಲ್ಲಿಂಗ್‌ ಪ್ರೊಗ್ರಾಂ) ಚಾಲನೆ ನೀಡಲಾಯಿತು. ಆಗ ಮಾರಾಟಗಾರರ ಸಂಖ್ಯೆ ನೂರರ ಲೆಕ್ಕದಲ್ಲಿತ್ತು. ಇಂದು 50 ಸಾವಿರ ಮಾರಾಟಗಾರರು ಕಾರ್ಯಕ್ರಮದ ಭಾಗವಾಗಿದ್ದಾರೆ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಭಾರತದಲ್ಲಿ ತಯಾರಾಗಿರುವ 14 ಕೋಟಿಗೂ ಅಧಿಕ ಉತ್ಪನ್ನಗಳನ್ನು ಅಮೆಜಾನ್‌ಡಾಟ್‌ಕಾಂ, ಅಮೆಜಾನ್‌ ಡಾಟ್‌ಕೊಡಾಟ್‌ಯುಕೆ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಅಮೆಜಾನ್‌ ಎಕ್ಸ್‌ಪೋರ್ಟ್‌ ಡೈಜೆಸ್ಟ್‌ನ ಎರಡನೇ ಆವೃತ್ತಿಯ ಪ್ರಕಾರ, 2018ರಲ್ಲಿ ಒಟ್ಟಾರೆ ಜಾಗತಿಕ ಮಾರಾಟಗಾರರಲ್ಲಿ ಶೇ 56ರಷ್ಟು ಭಾರತದವರಾಗಿದ್ದಾರೆ.

‘ಅಮೆಜಾನ್‌ನ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಉತ್ಪನ್ನಗಳನ್ನು ಆಯ್ಕೆ ಮಾಡುವವರ ಪ್ರಮಾಣ ಶೇ 55ರಷ್ಟು ಏರಿಕೆ ಕಂಡಿದ್ದರೆ, ಮಾರಾಟಗಾರರ ಬೆಳವಣಿಗೆ ಶೇ 71ರಷ್ಟಿದೆ. ಜಾಗತಿಕ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಭಾರತದ ಪುಸ್ತಕ, ಚಿನ್ನಾಭರಣ, ಆರೋಗ್ಯ ಮತ್ತು ವೈಯಕ್ತಿಕ ಕಾಳಜಿಯ ಉತ್ಪನ್ನಗಳಿಗೆ ಭಾರಿ ಬೇಡಿಕೆ ಇದೆ’ ಎಂದೂ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು