ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂ. 1 – 4ರ ವರೆಗೆ ಗೃಹಾಲಂಕಾರ ವಸ್ತುಗಳಿಗೆ ಅಮೆಜಾನ್‌ನಲ್ಲಿ ಶೇ 70 ರಿಯಾಯಿತಿ

Published 31 ಮೇ 2023, 13:18 IST
Last Updated 31 ಮೇ 2023, 13:18 IST
ಅಕ್ಷರ ಗಾತ್ರ

ಬೆಂಗಳೂರು: ಗೃಹಾಲಂಕಾರ ಪ್ರಿಯರಿಗೆ ಅಮೆಜಾನ್‌ ವಿಶೇಷ ರಿಯಾಯಿತಿ ಘೋಷಣೆ ಮಾಡಿದೆ. ಜೂನ್‌ 1 ರಿಂದ 4ರ ವರೆಗೆ ‘ಹೋಂ ಶಾಪಿಂಗ್‌ ಸ್ಪ್ರೀ‘ ಎನ್ನುವ ವಿಶೇಷ ಆಫರ್‌ ಸೇಲ್‌ ಮಾಡುತ್ತಿದೆ.

ಖ್ಯಾತ ಬ್ರಾಂಡ್‌ಗಳ ಉತ್ಪನ್ನಗಳನ್ನು ಆಫರ್‌ ದರದಲ್ಲಿ ಮಾರಾಟ ಮಾಡುವುದಾಗಿ ಅಮೆಜಾನ್‌ ಹೇಳಿದೆ.

‌ವಿವಿಧ ಬಗೆಗಳ ಗೃಹಾಲಂಕಾರ ವಸ್ತುಗಳು, ಅಡುಗೆಮನೆ ಅಲಂಕಾರ ವಸ್ತುಗಳು, ಬೆಡ್ ಶೀಟ್‌ಗಳು, ವಾಟರ್‌ ಪ್ಯೂರಿಫೈರ್‌, ಪೀಠೋಪಕರಣಗಳು, ಆಟದ ಸಾಮಗ್ರಿಗಳು, ಮನೆತೋಟದ ಸಮಾಗ್ರಿಗಳು ಕಡಿಮೆ ದರದಲ್ಲಿ ಲಭ್ಯವಾಗಲಿದೆ.

ಸೊಲಿಮೊ, ಹವೆಲ್ಸ್‌, ಬ್ಲೂ ಸ್ಟಾರ್‌, ಯುರೇಕಾ, ಪಿಜನ್‌, ಪ್ರೆಸ್ಟೀಜ್‌, ದಿ ಸ್ಲೀಪ್‌ ಕಂ‍ಪನಿ, ಸೆಲ್‌ಬೆಲ್‌, ಬಾಷ್‌, ಅಗಾರೊ ಹಾಗೂ ಇನ್ನಿತರ ಪ್ರಸಿದ್ಧ ಕಂಪನಿಗಳ ಉತ್ಪನ್ನಗಳು ಲಭ್ಯವಾಗಲಿದೆ.

ಗೃಹಾಲಂಕಾರ, ಬೇಸಿಗೆಯ ಉತ್ಪನ್ನಗಳು, ಅಡುಗೆ ಮನೆಯ ಉತ್ಪನ್ನಗಳು, ಮನೆತೋಟದ, ಗೋಡೆ ಅಲಂಕಾರ ವಸ್ತುಗಳು, ಮಿಕ್ಸರ್‌ ಗ್ರೈಂಡರ್ಸ್‌, ಫ್ಯಾನ್‌ಗಳು, ವಾಕ್ಯೂಮ್‌ಗಳು, ಕುಕ್‌ವೇರ್‌ಗಳು, ಬಾತ್‌ರೂಮ್‌ ಫಿಟ್ಟಿಂಗ್‌ಗಳು ಹಾಗೂ ಇನ್ನಿತರ ವಸ್ತುಗಳ ಮೇಲೆ ಶೇ 70 ರಷ್ಟು ರಿಯಾಯಿತಿ ಇರಲಿದೆ.

ಸ್ಟೇಟ್‌ ಬ್ಯಾಂಕ್‌ ಇಂಡಿಯಾ ಕ್ರೆಡಿಟ್‌ ಕಾರ್ಡ್‌ ಮೂಲಕ ಪಾವತಿ ಮಾಡುವವರಿಗೆ ₹ 750 ಹೆಚ್ಚುವರಿ ಡಿಸ್ಕೌಂಟ್‌ ಹಾಗೂ ಕನಿಷ್ಠ ₹ 1000 ಖರೀದಿಗೆ ₹ 100 ರಿಯಾಯಿತಿ ದೊರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT