ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲಪತ್ರ ಆಧಾರಿತ ಉಳಿತಾಯ ಯೋಜನೆ: ಎಎಂಎಫ್‌ಐ ಬೇಡಿಕೆ

Last Updated 13 ಡಿಸೆಂಬರ್ 2021, 14:12 IST
ಅಕ್ಷರ ಗಾತ್ರ

ನವದೆಹಲಿ: ಈಕ್ವಿಟಿ ಆಧಾರಿತ ಉಳಿತಾಯ ಯೋಜನೆ (ಇಎಲ್‌ಎಸ್‌ಎಸ್‌) ಮಾದರಿಯಲ್ಲಿಯೇ ಆದಾಯ ತೆರಿಗೆ ವಿನಾಯಿತಿ ಹೊಂದಿರುವ ಸಾಲಪತ್ರ ಆಧಾರಿತ ಉಳಿತಾಯ ಯೋಜನೆ (ಡಿಎಲ್‌ಎಸ್‌ಎಸ್‌) ಆರಂಭಿಸಲು ಅವಕಾಶ ನೀಡುವಂತೆ ಭಾರತೀಯ ಮ್ಯೂಚುವಲ್ ಫಂಡ್‌ ಕಂಪನಿಗಳ ಒಕ್ಕೂಟವು (ಎಎಂಎಫ್‌ಐ) ಕೇಂದ್ರ ಸರ್ಕಾರವನ್ನು ಕೋರಿದೆ.

ಎಫ್‌.ಡಿ. ಮಾದರಿಯಲ್ಲಿ ಐದು ವರ್ಷಗಳ ಲಾಕ್‌ಇನ್‌ ಅವಧಿ ನೀಡಿ, ‘ಡಿಎಲ್‌ಎಸ್‌ಎಸ್‌’ನಲ್ಲಿ ₹ 1.5 ಲಕ್ಷದವರೆಗಿನ ಹೂಡಿಕೆಗೆ ತೆರಿಗೆ ವಿನಾಯಿತಿ ನಿಡುವಂತೆಯೂ ಒಕ್ಕೂಟವು ಬೇಡಿಕೆ ಇಟ್ಟಿದೆ. ಸದ್ಯ, ಆದಾಯ ತೆರಿಗೆ ಕಾಯ್ದೆ ಸೆಕ್ಷನ್‌ 80ಸಿಸಿಸಿ ಅಡಿಯಲ್ಲಿ ಹಣಕಾಸು ವರ್ಷವೊಂದರಲ್ಲಿ ಇಎಲ್‌ಎಸ್‌ಎಸ್‌ನಲ್ಲಿ ಮಾಡುವ ₹ 1.5 ಲಕ್ಷದವರೆಗಿನ ಹೂಡಿಕೆಗೆ ತೆರಿಗೆ ವಿನಾಯಿತಿ ಇದೆ.

ಸಾಲಪತ್ರ ಆಧಾರಿತ ಮ್ಯೂಚುವಲ್‌ ಫಂಡ್‌ ಹಾಗೂ ಸಾಲಪತ್ರಗಳಲ್ಲಿ ನೇರ ಹೂಡಿಕೆ ಮೇಲಿನ ತೆರಿಗೆಯಲ್ಲಿ ಏಕರೂಪತೆ ತರುವಂತೆಹಣಕಾಸು ಸಚಿವಾಲಯಕ್ಕೆ ಕಳುಹಿಸಿರುವ ಬಜೆಟ್‌ ಪ್ರಸ್ತಾವನೆಯಲ್ಲಿ ಎಎಂಎಫ್‌ಐ ಒತ್ತಾಯಿಸಿದೆ. ಮ್ಯೂಚುವಲ್‌ ಫಂಡ್‌ ಮತ್ತು ಯುಲಿಪ್‌ ಮಧ್ಯೆ ತೆರಿಗೆ ಸಮಾನತೆ ತರುವಂತೆಯೂ ಅದು ಕೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT