ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕೆಸಿಗೆ ಅಮಿತಾಭ್ ಬ್ರ್ಯಾಂಡ್ ರಾಯಭಾರಿ

Last Updated 23 ಸೆಪ್ಟೆಂಬರ್ 2021, 15:56 IST
ಅಕ್ಷರ ಗಾತ್ರ

ಬೆಂಗಳೂರು: ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ಪಾದರಕ್ಷೆಗಳನ್ನು ತಯಾರಿಸುವ ಕಂಪನಿ ‘ವಿಕೆಸಿ’ಯ ಬ್ರ್ಯಾಂಡ್ ರಾಯಭಾರಿ ಆಗಲಿದ್ದಾರೆ. ಬಚ್ಚನ್ ಅವರು ಪಾದರಕ್ಷೆ ತಯಾರಿಸುವ ಕಂಪನಿಯೊಂದರ ಬ್ರ್ಯಾಂಡ್ ರಾಯಭಾರಿ ಆಗಲು ಒಪ್ಪಿರುವುದು ಇದೇ ಮೊದಲು ಎಂದು ಕಂಪನಿಯು ಹೇಳಿದೆ.

‘ವಿಕೆಸಿ ಬ್ರ್ಯಾಂಡ್‌ಗೆ ಅನುಮೋದನೆ ನೀಡುತ್ತಿರುವುದು ನನಗೆ ಸಂತಸ ತಂದಿದೆ’ ಎಂದು ಬಚ್ಚನ್ ಅವರು ಹೇಳಿದ್ದಾರೆ. ‘ದೇಶದ ಸಿನಿಮಾ ರಂಗದ ದಂತಕಥೆ ಆಗಿರುವ ಬಚ್ಚನ್ ಅವರ ಜೊತೆಗಿನ ಸಹಭಾಗಿತ್ವವು ವಿಕೆಸಿ ಸಮೂಹಕ್ಕೆ ಗೌರವ ತಂದಿದೆ’ ಎಂದು ಸಮೂಹದ ವ್ಯವಸ್ಥಾಪಕ ನಿರ್ದೇಶಕ ವಿಕೆಸಿ ಅಬ್ದುಲ್ ರಜಾಕ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT