ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 28 ಜುಲೈ 2020, 21:15 IST
ಅಕ್ಷರ ಗಾತ್ರ

ಹೆಸರು ಬೇಡ, ಊರು ಬೆಂಗಳೂರು

ನಾನು ನಿವೃತ್ತ ನೌಕರ. ವಾರ್ಷಿಕ ಪಿಂಚಣಿ ₹ 7 ಲಕ್ಷ. ಠೇವಣಿ ಮೇಲಿನ ವಾರ್ಷಿಕ ಬಡ್ಡಿ ₹ 75,000. ಸೆಕ್ಷನ್ 80ಸಿ ಆಧಾರದ ಮೇಲೆ ₹ 1.50 ಲಕ್ಷ ಉಳಿತಾಯ ಮಾಡಿದ್ದೇನೆ. ನನಗೆ ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಇದೆಯೇ. ಇದ್ದರೆ ಎಷ್ಟು? ಔಷಧೋಪಚಾರದ ವಾರ್ಷಿಕ ಖರ್ಚು ₹ 45 ಸಾವಿರ. ತೆರಿಗೆ–ರಿಟರ್ನ್ಸ್‌ ವಿಚಾರದಲ್ಲಿ ಮಾಹಿತಿ ನೀಡಿ.

ಉತ್ತರ: ನಿವೃತ್ತ ಪಿಂಚಣಿದಾರರಾಗಿರು ವುದರಿಂದ ಸೆಕ್ಷನ್‌ 16ರ ಆಧಾರದ ಮೇಲೆ ನಿಮಗೆ ವಾರ್ಷಿಕ ₹ 50 ಸಾವಿರ ವಿನಾಯಿತಿ ಸ್ಟ್ಯಾಂಡರ್ಡ್‌ ಡಿಡಕ್ಷನ್‌ನಲ್ಲಿ ಇದೆ. ಔಷಧೋಪಚಾರದ ಖರ್ಚು ಒಟ್ಟು ಆದಾಯದಿಂದ ಕಳೆಯುವಂತಿಲ್ಲ. ಆರೋಗ್ಯ ವಿಮೆ ಮಾಡಿದ್ದರೆ ಗರಿಷ್ಠ ₹ 50 ಸಾವಿರ ಸೆಕ್ಷನ್‌ 80ಡಿ ಆಧಾರದ ಮೇಲೆ ವಿನಾಯಿತಿ ಇದೆ. ಬ್ಯಾಂಕ್ ಠೇವಣಿ ಬಡ್ಡಿಯಲ್ಲಿ ಗರಿಷ್ಠ ₹ 50 ಸಾವಿರ ಸೆಕ್ಷನ್‌ 80ಟಿಟಿಬಿ ಆಧಾರದ ಮೇಲೆ ವಿನಾಯತಿ ಇದೆ. ಸೆಕ್ಷನ್‌ 16 ಮತ್ತು 80ಸಿ ಹಾಗೂ 80ಟಿಟಿಬಿ ಒಟ್ಟಾರೆ
₹ 2.50 ಲಕ್ಷ ನಿಮ್ಮ ಒಟ್ಟು ಆದಾಯ ₹ 7.75 ಲಕ್ಷದಿಂದ ಕಳೆದಾಗ ನಿಮ್ಮ ಆದಾಯ ₹ 5.25 ಲಕ್ಷ ಆಗಲಿದೆ. ನೀವು ಆರೋಗ್ಯ ವಿಮೆ ಮಾಡಿಸಿದ್ದರೆ ಆ ಮೊತ್ತ ₹ 5.25 ಲಕ್ಷದಿಂದ ಕಳೆದು ಸಂಪೂರ್ಣ ತೆರಿಗೆ ಉಳಿಸಿಬಹುದು. ಹೀಗೆ ಮಾಡದಿದ್ದರೆ ₹ 3 ಲಕ್ಷದಿಂದಲೇ ತೆರಿಗೆ ಕೊಡಬೇಕಾಗುತ್ತದೆ. ತೆರಿಗೆ ₹ 15,000 ಹಾಗೂ ₹ 15,000ದ ಮೇಲೆ ಶೇಕಡ 4ರಷ್ಟು ಶಿಕ್ಷಣ ಸೆಸ್ ಕೊಡಬೇಕಾಗುತ್ತದೆ. ಐ.ಟಿ ರಿಟರ್ನ್ಸ್‌ ನವೆಂಬರ್‌ 30ರ ಒಳಗಾಗಿ ಸಲ್ಲಿಸಿ.

ಮುರಳೀಧರ ಕುಲಕರ್ಣಿ, ಬೀದರ್

ನಾನು ಪಿಂಚಣಿದಾರ. ವಯಸ್ಸು 73. ₹ 5 ಲಕ್ಷ ವಾರ್ಷಿಕ ಪಿಂಚಣಿ, ₹ 1.50 ಲಕ್ಷ ಬ್ಯಾಂಕ್‌ ಠೇವಣಿ ಮೇಲಿನ ಬಡ್ಡಿ ಬಂದು ಸೆಕ್ಷನ್ 80ಸಿ ಯಲ್ಲಿ ₹ 1.50 ಲಕ್ಷ ಉಳಿತಾಯ ಮಾಡಿದರೆ ಎಷ್ಟು ತೆರಿಗೆ ಬರುತ್ತದೆ? ನಾನು ರಿಟರ್ನ್ಸ್‌ ತುಂಬಬೇಕಾ ತಿಳಿಸಿ. ಅಂಚೆ ಕಚೇರಿ ಠೇವಣಿಗೂ ಸೆಕ್ಷನ್‌ 80ಟಿಟಿಬಿ ಅನ್ವಯವಾಗುವುದೇ? ನಾನು ಪಿಪಿಎಫ್‌ ಖಾತೆ ಪ್ರಾರಂಭಿಸಲೇ?

ಉತ್ತರ: ಪಿಂಚಣಿ–ಬ್ಯಾಂಕ್‌ ಠೇವಣಿ ಮೇಲಿನ ಬಡ್ಡಿ ಸೇರಿದಾಗ ನಿಮ್ಮ ವಾರ್ಷಿಕ ಒಟ್ಟು ಆದಾಯ ₹ 6.50 ಲಕ್ಷ ಆಗುತ್ತದೆ. ನಿಮಗೆ ಸೆಕ್ಷನ್ 16, ₹ 50 ಸಾವಿರ, ಸೆಕ್ಷನ್‌ 80ಟಿಟಿಬಿಯಲ್ಲಿ ₹ 50 ಸಾವಿರ, 80ಸಿಯಲ್ಲಿ ₹ 1.50 ಲಕ್ಷ ಒಟ್ಟು ₹ 2.50 ಲಕ್ಷ ವಿನಾಯಿತಿ ಇರುವುದರಿಂದ ನಿಮ್ಮ ವಾರ್ಷಿಕ ಆದಾಯ ₹ 4 ಲಕ್ಷಕ್ಕೆ ಇಳಿಯುತ್ತದೆ. ನೀವು ತೆರಿಗೆಗೆ ಒಳಗಾವುದಿಲ್ಲ. ಆದರೆ, ₹ 3 ಲಕ್ಷ ದಾಟುವುದರಿಂದ ಐ.ಟಿ .ರಿಟರ್ನ್ಸ್‌ ತುಂಬಬೇಕು. ಪಿಪಿಎಫ್‌ 15 ವರ್ಷದ ಹೂಡಿಕೆಯಾದ್ದರಿಂದ ನಿಮ್ಮ ವಯಸ್ಸಿಗೆ ಅವಶ್ಯಕತೆ ಇಲ್ಲ. ಅಂಚೆ ಕಚೇರಿ ಠೇವಣಿಗೂ ಸೆಕ್ಷನ್‌ 80ಟಿಟಿಬಿ ವಿನಾಯಿತಿ ಇದೆ. (ಸೆಕ್ಷನ್‌ 80ಟಿಟಿಬಿ ಬ್ಯಾಂಕ್‌ ಹಾಗೂ ಅಂಚೆ ಕಚೇರಿ ಠೇವಣಿಗಳಿಗೆ ಮಾತ್ರ ಅನ್ವಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT