ನವದೆಹಲಿ: ಐಫೋನ್ ತಯಾರಿಕಾ ಕಂಪನಿ ಆ್ಯಪಲ್ನ ಸಿಇಒ ಟಿಮ್ ಕುಕ್ ಅವರು ತಮ್ಮ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ಸಿಇಒ ಹುದ್ದೆಗೆ ಅದೇ ಕಂಪನಿಯಲ್ಲಿ ಬಹುಕಾಲದಿಂದ ಕರ್ತವ್ಯ ನಿರ್ವಹಿಸುತ್ತಿರುವ ಜಾನ್ ಟರ್ನಸ್ ಅವರು ಬರಲಿದ್ದಾರೆ.

ಟಿಮ್ ಕುಕ್ ಅವರು ಸಿಇಒ ಹುದ್ದೆಯಲ್ಲಿ ಒಂದೂವರೆ ದಶಕ ಇದ್ದರು. ಈ ಅವಧಿಯಲ್ಲಿ ಕಂಪನಿಯು ಸ್ಥಿರವಾದ ಬೆಳವಣಿಗೆ ದಾಖಲಿಸಿದೆ.

ಕಂಪನಿಯು ಮಾರುಕಟ್ಟೆಯಲ್ಲಿ ಹೊಂದಿರುವ ಪಾಲನ್ನು ಉಳಿಸಿಕೊಳ್ಳುವ, ಎ.ಐ. ಆಧಾರಿತ ವ್ಯವಸ್ಥೆಗಳಲ್ಲಿ ಕಂಪನಿಯ ಮುಂದಿನ ಹಂತದ ಬೆಳವಣಿಗೆಯನ್ನು ಸಾಧ್ಯವಾಗಿಸುವ ಹೊಣೆಯು ಹೊಸ ಸಿಇಒ ಅರ್ನಸ್ ಅವರ ಮೇಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಟಿಮ್ ಕುಕ್ ಅವರು ಕಂಪನಿಯ ಸೇವಾ ಜಾಲವನ್ನು ವಿಸ್ತರಿಸಿದ್ದರು. ಟರ್ನಸ್ ಅವರಿಗೆ ಹಿಂದೆಂದೂ ಕಾಣದಂತಹ ಅವಕಾಶಗಳು ಲಭ್ಯ ಆಗಬಹುದಾದರೂ, ಕಂಪನಿಯ ಎ.ಐ ಕಾರ್ಯತಂತ್ರಕ್ಕೆ ವೇಗ ನೀಡುವ ವಿಚಾರದಲ್ಲಿ, ಕಂಪನಿಯ ಮುಂದಿನ ಹಂತದ ಬೆಳವಣಿಗೆ ಸಾಧ್ಯವಾಗಿಸುವಲ್ಲಿ ಅವರ ಮುಂದೆ ಬಹಳ ನಿರೀಕ್ಷೆಗಳಿವೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.