ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 500ರ ಗಡಿ ದಾಟಿದ ಅಡಿಕೆ

ಕ್ಯಾಂಪ್ಕೊ ಇತಿಹಾಸದಲ್ಲೇ ದಾಖಲೆ
Last Updated 10 ಫೆಬ್ರುವರಿ 2021, 16:51 IST
ಅಕ್ಷರ ಗಾತ್ರ

ಮಂಗಳೂರು: ಅಡಿಕೆ ಬೆಲೆಯು ಬುಧವಾರ ಕೆ.ಜಿ.ಗೆ ₹ 500ರ ಗಡಿ ದಾಟಿದ್ದು, ಕ್ಯಾಂಪ್ಕೊ ಸಾರ್ವಕಾಲಿಕ ಅಧಿಕ ಬೆಲೆಗೆ ಖರೀದಿ ನಡೆಸಿದೆ.

ಕ್ಯಾಂಪ್ಕೊ ಡಬಲ್‌ ಚೋಲ್‌ (ಜನತಾ ಜನತಾ–ಗ್ರೇಡ್‌) ಅಡಿಕೆಯನ್ನು ಕೆ.ಜಿಗೆ ₹505 ರಂತೆ ಖರೀದಿಸಿದರೆ, ಸಿಂಗಲ್‌ ಚೋಲ್‌ಗೆ (ಜನತಾ ಜನತಾ–ಗ್ರೇಡ್‌) ₹ 500 ನೀಡಿದೆ. ಅಲ್ಲದೆ, ಹೊಸ ಅಡಿಕೆಗೆ ₹ 415 ನೀಡಿದೆ.

‘1973ರಲ್ಲಿ ಕ್ಯಾಂಪ್ಕೊ ಸ್ಥಾಪನೆಯಾಗಿದ್ದು, ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಕೆ.ಜಿ.ಗೆ ₹ 500ಕ್ಕೂ ಅಧಿಕ ಬೆಲೆಗೆ ಅಡಿಕೆ ಖರೀದಿಸಿದೆ’ ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಳುವರಿ ಶೇ 40ರಷ್ಟು ಇಳಿಕೆ, ಮಾರುಕಟ್ಟೆಯಲ್ಲಿ ಹೆಚ್ಚಿದ ಬೇಡಿಕೆ ಹಾಗೂ ಆಮದಿನ ಮೇಲೆ ಕೇಂದ್ರ ಸರ್ಕಾರ ಹೇರಿದ ನಿಯಂತ್ರಣದಿಂದ ಈ ಬೆಲೆ ಬಂದಿದೆ. ಮಾರುಕಟ್ಟೆ ಯಲ್ಲಿ ಬೇಡಿಕೆ ಇರುವ ತನಕ ಕ್ಯಾಂಪ್ಕೊ ಕೃಷಿಕರಿಗೆ ಗರಿಷ್ಠ ಬೆಲೆ ನೀಡಲಿದೆ’ ಎಂದರು.

ಖಾಸಗಿ ಮಾರುಕಟ್ಟೆ ಯಲ್ಲಿ ಅಡಿಕೆ ಕೆ.ಜಿಗೆ ಗರಿಷ್ಠ ₹ 515ಕ್ಕೆ ಖರೀದಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT