ಸೋಮವಾರ, ಸೆಪ್ಟೆಂಬರ್ 21, 2020
25 °C

ಕೃತಕ ಬುದ್ಧಿಮತ್ತೆ ಉದ್ಯೋಗ ಕಡಿತಗೊಳಿಸದು: ಮಿಹಿರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೃತಕ ಬುದ್ಧಿಮತ್ತೆ (ಎಐ), ರೋಬೊಟಿಕ್‌ ಪ್ರೊಸೆಸ್‌ ಆಟೊಮೇಷನ್‌ (ಆರ್‌ಪಿಎ) ತಂತ್ರಜ್ಞಾನದ ದೈತ್ಯ ಸಂಸ್ಥೆ ‘ಆಟೊಮೇಷನ್‌ ಎನಿವೇರ್‌’, ಭಾರತದಲ್ಲಿ ತನ್ನ ಹೊಸ ನಾಲ್ಕು ಕಚೇರಿ ಆರಂಭಿಸಿದೆ. 

ದೆಹಲಿ, ಹೈದರಾಬಾದ್‌, ಪುಣೆ ಮತ್ತು ಚೆನ್ನೈಗಳಲ್ಲಿ ಇವು ಕಾರ್ಯನಿರ್ವಹಿಸಲಿವೆ. ಬಂಡವಾಳ ಮಾರುಕಟ್ಟೆ, ದೂರಸಂಪರ್ಕ, ಮೂಲಸೌಕರ್ಯ ನಿರ್ಮಾಣ, ಚಿಲ್ಲರೆ ಮತ್ತು ದೂರ ಸಂಪರ್ಕ ಕ್ಷೇತ್ರಗಳ ಸೇವೆಗಳನ್ನು ಒದಗಿಸು ತ್ತಿರುವ ಗ್ರಾಹಕ ಕಂಪನಿಗಳಿಗೆ ‘ಆಟೊಮೇಷನ್‌ ಎನಿವೇರ್‌’ ನೆರವಾಗಲಿದೆ ಎಂದು ಕಂಪನಿ ಸಿಇಒ ಮಿಹಿರ್‌ ಶುಕ್ಲಾ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ಕಂಪನಿಯ ಎರಡು ಮತ್ತು ವಡೋದರಾದಲ್ಲಿ ಒಂದು ಎಂಜಿನಿಯರಿಂಗ್‌ ಕೇಂದ್ರವಿದೆ. ಪುಣೆಯಲ್ಲಿ ಸಂಶೋಧನಾ ಅಭಿವೃದ್ಧಿ ಕೇಂದ್ರ (ಆರ್‌ಆ್ಯಂಡ್‌ಡಿ) ಮತ್ತು ಮುಂಬೈನಲ್ಲಿ ಕಚೇರಿ ಇದ್ದು, 3,000 ಉದ್ಯೋಗಿಗಳು ‘ಬೊಟ್‌’ ತಂತ್ರಜ್ಞಾನದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು