ಸೋಮವಾರ, ಸೆಪ್ಟೆಂಬರ್ 16, 2019
27 °C

ಎಂಟು ತಿಂಗಳ ಕನಿಷ್ಠ ಮಟ್ಟಕ್ಕೆ ರೂಪಾಯಿ

Published:
Updated:
Prajavani

ಮುಂಬೈ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯವು ಗುರುವಾರ 26 ಪೈಸೆ ಇಳಿಕೆ ಕಂಡು ಎಂಟು ತಿಂಗಳ ಹಿಂದಿನ ಕನಿಷ್ಠ ಮಟ್ಟವಾದ ₹ 71.81ಕ್ಕೆ ಇಳಿಕೆಯಾಗಿದೆ.

2018ರ ಡಿಸೆಂಬರ್‌ 14ರಂದು ಡಾಲರ್‌ ಎದುರು ರೂಪಾಯಿ ₹ 71.90ರಷ್ಟಾಗಿತ್ತು.

ವಿದೇಶಿ ಸಾಂಸ್ಥಿಕ ಬಂಡವಾಳ ಹೊರಹರಿವು, ಸೂಚ್ಯಂಕದ ಕುಸಿತವು ರೂಪಾಯಿ ಮೌಲ್ಯದಲ್ಲಿ ಇಳಿಕೆ ಕಾಣುವಂತೆ ಮಾಡಿವೆ. ಚೀನಾದ ಕರೆನ್ಸಿ ಯುವಾನ್‌ ಮೌಲ್ಯ ದಿಢೀರನೆ ಕುಸಿತ ಕಂಡಿರುವುದು ಸಹ ರೂಪಾಯಿಯನ್ನೂ ಒಳಗೊಂಡು ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆಗಳ ಕರೆನ್ಸಿಗಳ ಮೇಲೆ ಪರಿಣಾಮ ಬೀರಿದೆ ಎಂದು ವರ್ತಕರು ಹೇಳಿದ್ದಾರೆ.

’ಆಗಸ್ಟ್‌ 7ರ ನಂತರ ರೂಪಾಯಿ ಮೌಲ್ಯ ಶೇ 0.6ರಷ್ಟು ಇಳಿಕೆ ಕಂಡರೆ, ಯುವಾನ್‌ ಮೌಲ್ಯ ಶೇ 0.40ರಷ್ಟು ಕಡಿಮೆಯಾಗಿದೆ‘ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಬಂಡವಾಳ ಮಾರುಕಟ್ಟೆ ವಿಶ್ಲೇಷಕ ವಿ.ಕೆ.ಶರ್ಮಾ ತಿಳಿಸಿದ್ದಾರೆ.

Post Comments (+)