ಶುಕ್ರವಾರ, ನವೆಂಬರ್ 22, 2019
19 °C

ವಹಿವಾಟು ವಿಸ್ತರಣೆಗೆ ‘ಏಸುಸ್‌’ ನಿರ್ಧಾರ

Published:
Updated:

ಬೆಂಗಳೂರು: ಲ್ಯಾಪ್‌ಟಾಪ್‌ ಮತ್ತು ಮೊಬೈಲ್‌ ತಯಾರಿಕಾ ಕಂಪನಿ ‘ಏಸುಸ್‌’, ಈ ವರ್ಷದ ಅಂತ್ಯದ ವೇಳೆಗೆ ಬೆಂಗಳೂರಿನಲ್ಲಿ 100 ಮಳಿಗೆ ತೆರೆಯುವ ಗುರಿ ಹಾಕಿಕೊಂಡಿದೆ. 

 ನಗರದ ಕೋರಮಂಗಲದ 80 ಅಡಿ ರಸ್ತೆಯಲ್ಲಿ ಆರಂಭಿಸಲಾದ ಹೊಸ ಮಾರಾಟ ಮಳಿಗೆ ಉದ್ಘಾಟಿಸಿದ ಕಂಪನಿಯ ಮಾರಾಟ ವಿಭಾಗದ ವ್ಯವಸ್ಥಾಪಕ ಜಿಗ್ನೇಶ್‌ ಭಾವಸಾರ್‌ ಈ ವಿಷಯ ತಿಳಿಸಿದ್ದಾರೆ.

‘ಏಸುಸ್‌ ಲ್ಯಾಪ್‌ಟಾಪ್‌ಗಳ ಮಾರಾಟದಲ್ಲಿ ಏರಿಕೆ ಕಂಡಿದೆ. ಮೊಬೈಲ್‌ಗಳೂ ಕಳೆದ ವರ್ಷದಿಂದ ದಾಖಲೆ ಮಾರಾಟ ಕಂಡಿವೆ. ತನ್ನ ಉನ್ನತೀಕರಿಸಿದ ತಂತ್ರಜ್ಞಾನದ ಮೂಲಕ ಕಂಪನಿ ಗ್ರಾಹಕರಲ್ಲಿ ವಿಶ್ವಾಸ ಮೂಡಿಸಿದೆ’ ಎಂದರು. ಮಳಿಗೆ ಮಾಲೀಕ ಗೌರವ್‌ ಜೈನ್‌ ಉಪಸ್ಥಿತರಿದ್ದರು. ವಿವೊ ಬುಕ್, ಝೆನ್ ಬುಕ್, ಝೆನ್ ಬುಕ್‌ ಫ್ಲಿಪ್ ಮತ್ತು ರಿಪಬ್ಲಿಕ್ ಆಫ್ ಗೇಮರ್ಸ್ (ಆರ್‌ಒಜಿ) ಲ್ಯಾಪ್‌ಟಾ‌ಪ್‌ಗಳು ಮಳಿಗೆಯಲ್ಲಿ ಲಭ್ಯವಿವೆ. 

ಪ್ರತಿಕ್ರಿಯಿಸಿ (+)