ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆ ಮಟ್ಟಕ್ಕೆ ವಿಮಾನ ಇಂಧನ ಬೆಲೆ

Last Updated 16 ಜೂನ್ 2022, 16:01 IST
ಅಕ್ಷರ ಗಾತ್ರ

ನವದೆಹಲಿ: ವಿಮಾನ ಇಂಧನ (ಎಟಿಎಫ್) ದರವನ್ನು ಗುರುವಾರ ಶೇಕಡ 16.26ರಷ್ಟು ಹೆಚ್ಚಿಸಲಾಗಿದೆ. ಇದು ಅತಿಹೆಚ್ಚಿನ ಪ್ರಮಾಣದ ಏರಿಕೆ. ಈ ಹೆಚ್ಚಳದಿಂದಾಗಿ ಎಟಿಎಫ್ ಬೆಲೆಯು ದೆಹಲಿಯಲ್ಲಿ ಕಿಲೋ ಲೀಟರ್‌ಗೆ ದಾಖಲೆಯ ₹ 1.41 ಲಕ್ಷ ತಲುಪಿದೆ.

ಈ ತಿಂಗಳ ಆರಂಭದಲ್ಲಿ ಎಟಿಎಫ್ ಬೆಲೆಯನ್ನು ಶೇ 1.3ರಷ್ಟು ಇಳಿಸಲಾಗಿತ್ತು. ಈ ವರ್ಷದಲ್ಲಿ ಬೆಲೆಯನ್ನು 11 ಬಾರಿ ಹೆಚ್ಚಿಸಲಾಗಿದ್ದು, ವರ್ಷದ ಆರಂಭದಲ್ಲಿದ್ದ ಮಟ್ಟಕ್ಕೆ ಹೋಲಿಸಿದರೆ ಬೆಲೆಯು ಸರಿಸುಮಾರು ದುಪ್ಪಟ್ಟಾಗಿದೆ.

ವಿಮಾನಯಾನ ಕಂಪನಿಗಳ ಕಾರ್ಯಾಚರಣಾ ವೆಚ್ಚದಲ್ಲಿ ಸರಿಸುಮಾರು ಶೇ 40ರಷ್ಟು ಎಟಿಎಫ್‌ಗೆ ವಿನಿಯೋಗವಾಗುತ್ತದೆ. ವಿಮಾನಯಾನ ದರವು ಶೇ 10ರಿಂದ ಶೇ 15ರಷ್ಟು ಜಾಸ್ತಿಯಾಗಬಹುದು ಎಂದು ಸ್ಪೈಸ್‌ಜೆಟ್‌ ಅಧ್ಯಕ್ಷ ಅಜಯ್ ಸಿಂಗ್ ಹೇಳಿದ್ದಾರೆ.

2021ರ ಜೂನ್‌ ನಂತರದಲ್ಲಿ ಎಟಿಎಫ್ ಬೆಲೆಯು ಶೇ 120ಕ್ಕಿಂತ ಹೆಚ್ಚು ಜಾಸ್ತಿಯಾಗಿದೆ. ಈ ಏರಿಕೆಯು ಸುಸ್ಥಿರವಾಗಿಲ್ಲ. ಎಟಿಎಫ್ ಮೇಲಿನ ತೆರಿಗೆಗಳನ್ನು ಕಡಿಮೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT