ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ಇಂಧನ ದರ ಹೆಚ್ಚಳ

Last Updated 16 ಏಪ್ರಿಲ್ 2022, 18:15 IST
ಅಕ್ಷರ ಗಾತ್ರ

ನವದೆಹಲಿ: ವಿಮಾನ ಇಂಧನ (ಜೆಟ್‌ ಇಂಧನ) ದರವನ್ನು ಪ್ರತಿ ಕಿಲೋ ಲೀಟರಿಗೆ ₹ 277.5ರಷ್ಟು (ಶೇ 0.2) ಏರಿಕೆ ಮಾಡಲಾಗಿದೆ.

ಶನಿವಾರದ ದರ ಏರಿಕೆಯನ್ನೂ ಒಳಗೊಂಡು ಈ ವರ್ಷದಲ್ಲಿ ಈವರೆಗೆ ಒಟ್ಟಾರೆ ಎಂಟು ಬಾರಿ ದರ ಹೆಚ್ಚಳ ಮಾಡಿದಂತಾಗಿದೆ. ಇದರಿಂದಾಗಿ ಪ್ರತಿ ಕಿಲೋ ಲೀಟರಿಗೆ ಒಟ್ಟಾರೆ ₹ 39,180ರಷ್ಟು ಏರಿಕೆ ಆಗಿದೆ. (ಒಂದು ಕಿಲೋ ಲೀಟರ್‌ ಎಂದರೆ ಒಂದು ಸಾವಿರ ಲೀಟರ್).

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ದರ ಏರಿಕೆಗೆ ಅನುಗುಣವಾಗಿ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಈ ಪರಿಷ್ಕರಣೆ ಮಾಡಿವೆ.

ದೆಹಲಿಯಲ್ಲಿ ಶನಿವಾರ ಇಂಧನ ದರ ಪ್ರತಿ ಕಿಲೋ ಲೀಟರಿಗೆ ₹ 1.13 ಲಕ್ಷಕ್ಕೆ ಏರಿಕೆ ಆಗಿದೆ. ಮುಂಬೈನಲ್ಲಿ ₹ 1.11 ಲಕ್ಷಕ್ಕೆ ತಲುಪಿದೆ.

ಈ ಹಿಂದೆ ಮಾರ್ಚ್‌ 16ರಂದು ವಿಮಾನ ಇಂಧನ ದರವನ್ನು ಪ್ರತಿ ಕಿಲೋ ಲೀಟರಿಗೆ ಶೇ 18.3 ರಷ್ಟು (₹ 17,135.63) ಗರಿಷ್ಠ ಏರಿಕೆ ಮಾಡಲಾಗಿತ್ತು.

ವಿಮಾನವೊಂದರ ಒಟ್ಟಾರೆ ವೆಚ್ಚದಲ್ಲಿ ಇಂಧನದ ವೆಚ್ಚವೇ ಬಹುತೇಕ ಶೇ 40ರಷ್ಟು ಆಗುತ್ತದೆ.

ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸತತ 10ನೇ ದಿನವೂ ಯಥಾಸ್ಥಿತಿ ಕಾ‌ಯ್ದುಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT