ಶನಿವಾರ, ಆಗಸ್ಟ್ 13, 2022
27 °C

ಮಹಿಳೆಯರಿಗೆ ಆತ್ಮನಿರ್ಭರ ಯೋಜನೆ: ಬಿಒಬಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ನೆರವಾಗುವ ಉದ್ದೇಶದಿಂದ ‘ಮಹಿಳೆಯರ ಆತ್ಮನಿರ್ಭರ’ ಎನ್ನುವ ವಿಶೇಷ ಯೋಜನೆಯನ್ನು ಬ್ಯಾಂಕ್‌ ಆಫ್‌ ಬರೋಡಾ (ಬಿಒಬಿ) ಜಾರಿಗೊಳಿಸಿದೆ.

ತನ್ನ ಚಿನ್ನದ ಸಾಲ ಯೋಜನೆಯಡಿಯಲ್ಲಿ ಇದನ್ನು ಜಾರಿಗೊಳಿಸಿದೆ. ಬ್ಯಾಂಕ್‌ನ ರಾಮಮೂರ್ತಿ ನಗರ ಶಾಖೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ರಾಜೀವ್‌ ಛಧಾ ಯೋಜನೆಗೆ ಚಾಲನೆ ನೀಡಿದರು. ಬ್ಯಾಂಕ್‌ನ ಮುಂಬೈ ಕಾರ್ಪೊರೇಟ್‌ ಕಚೇರಿಯ ಕಾರ್ಯನಿರ್ವಾಹಕ ನಿರ್ದೇಶಕ ವಿಕ್ರಮಾದಿತ್ಯ ಸಿಂಗ್‌ ಖಿಚಿ, ಬ್ಯಾಂಕ್‌ನ ಬೆಂಗಳೂರು ವಲಯದ ಮುಖ್ಯಸ್ಥೆ ಮಿನಿ ಟಿ.ಎಂ. ಮತ್ತು ಇತರ ಕೆಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು