ಗುರುವಾರ , ಸೆಪ್ಟೆಂಬರ್ 23, 2021
22 °C
ನವೆಂಬರ್‌ನಲ್ಲಿ ಮತ್ತೆ ಮುಂದುವರಿದ ನಕಾರಾತ್ಮಕ ಚಲನೆ

ವಾಹನ ಮಾರಾಟ ಇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದಲ್ಲಿ ವಾಹನ ಮಾರಾಟವು ನವೆಂಬರ್‌ನಲ್ಲಿ ಮತ್ತೆ ಇಳಿಮುಖ ಹಾದಿ ಹಿಡಿದಿದೆ. 

ಮಂದಗತಿಯ ಆರ್ಥಿಕ ಬೆಳವಣಿಗೆಯಿಂದ ನಿರಂತರವಾಗಿ 10 ತಿಂಗಳವರೆಗೆ ಮಾರಾಟ ಕುಸಿತ ಕಂಡಿದ್ದ ವಾಹನ ತಯಾರಿಕಾ ವಲಯಕ್ಕೆ ಅಕ್ಟೋಬರ್‌ನಲ್ಲಿ ಹಬ್ಬದ ಖರೀದಿಯು ತುಸು ಚೇತರಿಕೆ ನೀಡಿತ್ತು. ಆದರೆ, ನವೆಂಬರ್‌ನಲ್ಲಿ ಮತ್ತೆ ಮಾರಾಟದಲ್ಲಿ ಇಳಿಕೆ ಕಾಣುವ ಮೂಲಕ ಬೇಡಿಕೆಯಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿಲ್ಲ ಎನ್ನುವುದನ್ನು ಖಾತರಿಪಡಿಸಿದೆ.

ಟಾಟಾ ಮೋಟರ್ಸ್‌, ಮಾರುತಿ, ಹೋಂಡಾ, ಮಹೀಂದ್ರಾ ಕಂಪನಿಗಳ ವಾಹನ ಮಾರಾಟದಲ್ಲಿ ಇಳಿಕೆ ಕಂಡು
ಬಂದಿದೆ. ಟಾಟಾ ಮೋಟರ್ಸ್‌ನ ಪ್ರಯಾಣಿಕ ವಾಹನ ಮಾರಾಟ ಶೇ 39ರಷ್ಟು, ವಾಣಿಜ್ಯ ವಾಹನ ಮಾರಾಟ ಶೇ 19ರಷ್ಟು ಕುಸಿತ ಕಂಡಿದೆ.

‘ಹಬ್ಬದ ಸಂದರ್ಭದಲ್ಲಿನ ಉತ್ತೇಜನಕಾರಿ ಬೆಳವಣಿಗೆಯ ಬಳಿಕ ನವೆಂಬರ್‌ನಲ್ಲಿ ಮಾರಾಟ ಇಳಿಕೆ ಕಂಡಿದೆ. ಉದ್ಯಮವು ಬಿಎಸ್‌–6ಗೆ ಸಿದ್ಧತೆ ನಡೆಸುತ್ತಿರುವುದೂ ಪರಿಣಾಮ ಬೀರಿದೆ’ ಎಂದು ಟಾಟಾ ಮೋಟರ್ಸ್‌ನ ಪ್ರಯಾಣಿಕ ಕಾರುಗಳ ವಿಭಾಗದ ಅಧ್ಯಕ್ಷ ಮಯಂಕ್‌ ಪಾರೀಖ್‌ ತಿಳಿಸಿದ್ದಾರೆ.

‘ಡಿಸೆಂಬರ್‌ನಲ್ಲಿ ಪ್ರಯಾಣಿಕ ವಾಹನಕ್ಕೆ ಬೇಡಿಕೆ ಬರುವ ನಿರೀಕ್ಷೆ ಇದ್ದು, ವಾಹನ ಉದ್ಯಮ ಚೇತರಿಸಿಕೊಳ್ಳುವ ಸಾಧ್ಯತೆ ಇದೆ’ ಎಂದು ಮಹೀಂದ್ರಾ ಕಂಪನಿಯ ಮಾರಾಟ ವಿಭಾಗದ ಮುಖ್ಯಸ್ಥ ವಿಜಯ್‌ ರಾಮ್‌ ನಕ್ರಾ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು