ಶನಿವಾರ, ಮಾರ್ಚ್ 25, 2023
30 °C

ವಾಹನಗಳ ಮಾರಾಟ ಪ್ರಮಾಣ: ಮಾರುತಿ, ಹುಂಡೈ ಇಳಿಕೆ, ಟಾಟಾ, ಮಹೀಂದ್ರ ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದ ಪ್ರಮುಖ ಕಾರು ತಯಾರಿಕಾ ಕಂಪನಿಗಳಾದ ಮಾರುತಿ ಸುಜುಕಿ ಮತ್ತು ಹುಂಡೈ ಅಕ್ಟೋಬರ್ ತಿಂಗಳ ಮಾರಾಟದ ಪ್ರಮಾಣದಲ್ಲಿ ಎರಡಂಕಿಗಳ ಇಳಿಕೆ ಕಂಡಿವೆ. ಜಾಗತಿಕ ಮಟ್ಟದಲ್ಲಿ ತಲೆದೋರಿರುವ ಸೆಮಿಕಂಡಕ್ಟರ್ ಕೊರತೆಯಿಂದಾಗಿ ಉತ್ಪಾದನೆ ತಗ್ಗಿರುವುದು ಇದಕ್ಕೆ ಪ್ರಮುಖ ಕಾರಣ.

ಕಿಯಾ ಇಂಡಿಯಾ, ಹೋಂಡಾ ಕಾರ್ಸ್‌ ಮತ್ತು ಎಂಜಿ ಮೋಟರ್‌ ಕಂಪನಿಗಳ ಕಾರು ಮಾರಾಟದ ಪ್ರಮಾಣದಲ್ಲಿ ಕೂಡ ಇಳಿಕೆ ಕಂಡುಬಂದಿದೆ. ಆದರೆ, ಟಾಟಾ ಮೋಟರ್ಸ್‌, ಮಹೀಂದ್ರ, ನಿಸಾನ್ ಮತ್ತು ಸ್ಕೋಡಾ ಕಂಪನಿಗಳ ವಾಹನ ಮಾರಾಟ ಪ್ರಮಾಣದಲ್ಲಿ ಏರಿಕೆ ದಾಖಲಾಗಿದೆ.

ಮಾರುತಿ ಸುಜುಕಿಯ ದೇಶಿ ಮಾರಾಟ ಪ್ರಮಾಣ ಅಕ್ಟೋಬರ್‌ನಲ್ಲಿ ಶೇಕಡ 32ರಷ್ಟು ಇಳಿಕೆ ಆಗಿದೆ. ಹುಂಡೈ ಮೋಟರ್‌ ಇಂಡಿಯಾ ಕಂಪನಿಯ ವಾಹನ ಮಾರಾಟ ಪ್ರಮಾಣವು ಶೇ 35ರಷ್ಟು ತಗ್ಗಿದೆ. ಕಿಯಾ ಇಂಡಿಯಾ ಕಂಪನಿಯು ವಾಹನ ಮಾರಾಟದಲ್ಲಿ ಶೇ 22ರಷ್ಟು ಇಳಿಕೆ ದಾಖಲಿಸಿದೆ. ಎಂಜಿ ಮೋಟರ್‌ನ ವಾಹನ ಮಾರಾಟ ಶೇ 24ರಷ್ಟು ಇಳಿಕೆ ಕಂಡಿದೆ.

ಮಹೀಂದ್ರ ಆ್ಯಂಡ್‌ ಮಹೀಂದ್ರ ಹಾಗೂ ಟಾಟಾ ಮೋಟರ್ಸ್‌ನ ಪ್ರಯಾಣಿಕ ವಾಹನ ಮಾರಾಟ ಪ್ರಮಾಣದಲ್ಲಿ ಕ್ರಮವಾಗಿ ಶೇ 8 ಹಾಗೂ ಶೇ 44ರಷ್ಟು ಹೆಚ್ಚಳ ಆಗಿದೆ. ನಿಸಾನ್ ಕಾರುಗಳ ಮಾರಾಟ ಪ್ರಮಾಣವು ಮೂರುಪಟ್ಟು, ಸ್ಕೋಡಾ ಕಾರುಗಳ ಮಾರಾಟ ಪ್ರಮಾಣವು ಎರಡುಪಟ್ಟಿಗಿಂತ ತುಸು ಜಾಸ್ತಿ ಏರಿಕೆ ಕಂಡಿದೆ.

ದ್ವಿಚಕ್ರ ವಾಹನ ವಿಭಾಗದಲ್ಲಿ ಟಿವಿಎಸ್‌ ಮೋಟರ್‌ ಕಂಪನಿ, ಸುಜುಕಿ ಮೋಟರ್‌ಸೈಕಲ್‌ ಇಂಡಿಯಾ ಮತ್ತು ಬಜಾಜ್ ಆಟೊ ಇಳಿಕೆ ದಾಖಲಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು