ನವದೆಹಲಿ/ಮುಂಬೈ: ವಿಮಾನ ಇಂಧನ ಬೆಲೆಯಲ್ಲಿನ ಹೆಚ್ಚಳ ಹಾಗೂ ಪ್ರಯಾಣಿಕರ ಸಂಖ್ಯೆಯಲ್ಲಿನ ಇಳಿಕೆಯ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ಉದ್ದೇಶದಿಂದ ದೇಶಿ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಲು ಏರ್ ಇಂಡಿಯಾ, ಇಂಡಿಗೊ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ಕಂಪನಿಗಳು ತೀರ್ಮಾನಿಸಿವೆ.

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಣಾಮವಾಗಿ ವಿಮಾನಯಾನ ಸೇವಾ ಕಂಪನಿಗಳು ಇಂಧನ ಬೆಲೆ ಹೆಚ್ಚಳ, ಸಂಚಾರ ನಿರ್ಬಂಧ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ಈ ಸಮಸ್ಯೆಗಳಿಂದಾಗಿ ಕಂಪನಿಗಳ ಕಾರ್ಯಾಚರಣೆ ವೆಚ್ಚ ಜಾಸ್ತಿಯಾಗಿದೆ.

ವೆಚ್ಚ ಜಾಸ್ತಿ ಆಗುತ್ತಿರುವ ಕಾರಣದಿಂದಾಗಿ ಈ ಮೂರು ಕಂಪನಿಗಳು ಮುಂದಿನ ತಿಂಗಳುಗಳಲ್ಲಿ ದೇಶಿ ವಿಮಾನಯಾನ ಸೇವೆಗಳಲ್ಲಿ ಒಂದಿಷ್ಟು ಬದಲಾವಣೆಗಳನ್ನು ತರಲಿವೆ. ಏರ್ ಇಂಡಿಯಾ ಕಂಪನಿಯು ಜೂನ್ ಮತ್ತು ಜುಲೈಗೆ ಅನ್ವಯವಾಗುವಂತೆ ದೇಶಿ ವಿಮಾನ ಸಂಚಾರವನ್ನು ಶೇ 22ರಷ್ಟು ಕಡಿಮೆ ಮಾಡಲಿದೆ, ಏರ್ ಇಂಡಿಯಾ ಎಕ್ಸ್ಪ್ರೆಸ್ ಕಂಪನಿಯು ಜೂನ್ ತಿಂಗಳಲ್ಲಿ ಸಂಚಾರವನ್ನು ಶೇ 10ರಷ್ಟು ತಗ್ಗಿಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಂಡಿಗೊ ಕಂಪನಿಯು ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಅನ್ವಯವಾಗುವಂತೆ ಶೇ 12ರಿಂದ ಶೇ 15ರಷ್ಟು ವಿಮಾನ ಸಂಚಾರವನ್ನು ಕಡಿಮೆ ಮಾಡಲಿದೆ.

ಏರ್ ಇಂಡಿಯಾ ಕಂಪನಿಯು ಪ್ರತಿವಾರ ಸರಿಸುಮಾರು 3,600 ವಿಮಾನ ಹಾರಾಟ ಸೇವೆಗಳನ್ನು ಒದಗಿಸುತ್ತದೆ. ಇದರಲ್ಲಿ ಶೇ 22ರಷ್ಟು ಸೇವೆಗಳು ಕಡಿಮೆ ಆಗಲಿರುವುದರ ಪರಿಣಾಮವಾಗಿ 790 ಸೇವೆಗಳು ಕಡಿಮೆ ಆಗಲಿವೆ.

‘ಏರ್ ಇಂಡಿಯಾ ಕಂಪನಿಯು ಬೇಡಿಕೆ ಹಾಗೂ ಕಾರ್ಯಾಚರಣೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತ ಇರಲಿದೆ. ಪರಿಸ್ಥಿತಿಯಲ್ಲಿ ಸ್ಥಿರತೆ ಕಂಡುಬಂದಾಗ ವಿಮಾನ ಹಾರಾಟ ಪ್ರಮಾಣವು ಮೊದಲಿನಂತಾಗಬಹುದು’ ಎಂದು ಕಂಪನಿ ಹೇಳಿದೆ.

ಇಂಡಿಗೊ ಕಂಪನಿಯು ದೇಶಿ ಮಾರ್ಗಗಳಲ್ಲಿ ವಾರಕ್ಕೆ ಅಂದಾಜು 13 ಸಾವಿರ ವಿಮಾನ ಹಾರಾಟ ಸೇವೆ ಒದಗಿಸುತ್ತಿದೆ. ಇದರಲ್ಲಿ ಶೇ 15ರಷ್ಟು ಕಡಿಮೆ ಆದಲ್ಲಿ, ವಾರಕ್ಕೆ 2,000 ವಿಮಾನ ಹಾರಾಟ ಸೇವೆಗಳನ್ನು ಕಡಿಮೆ ಮಾಡಿದಂತಾಗುತ್ತದೆ.

ಮೇ 13ರಂದು ನೀಡಿದ ಹೇಳಿಕೆಯೊಂದರಲ್ಲಿ ಏರ್ ಇಂಡಿಯಾ ಕಂಪನಿಯು, ಅಂತರರಾಷ್ಟ್ರೀಯ ಮಾರ್ಗಗಳಲ್ಲಿನ ವಿಮಾನ ಸೇವೆಗಳನ್ನು ಕೂಡ ಜೂನ್–ಆಗಸ್ಟ್ ಅವಧಿಯಲ್ಲಿ ಕಡಿಮೆ ಮಾಡುವುದಾಗಿ ತಿಳಿಸಿದೆ.

ಕಂಪನಿಯು ದೆಹಲಿ–ಷಿಕಾಗೊ, ದೆಹಲಿ–ನೆವಾರ್ಕ್, ಮುಂಬೈ–ನ್ಯೂಯಾರ್ಕ್, ದೆಹಲಿ–ಶಾಂಘೈ, ಚೆನ್ನೈ–ಸಿಂಗಪುರ, ಮುಂಬೈ–ಢಾಕಾ, ದೆಹಲಿ–ಮಾಲಿ ಸೇವೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.