ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ₹1.05 ಲಕ್ಷ ಕೋಟಿ ಹೂಡಿಕೆ ಮಾಡಲಿರುವ ಅಮೆಜಾನ್‌ ವೆಬ್‌ ಸರ್ವಿಸಸ್‌

Published 18 ಮೇ 2023, 16:16 IST
Last Updated 18 ಮೇ 2023, 16:16 IST
ಅಕ್ಷರ ಗಾತ್ರ

ಮುಂಬೈ : ಅಮೆಜಾನ್‌ ವೆಬ್‌ ಸರ್ವಿಸಸ್‌ (ಎಡಬ್ಲ್ಯುಎಸ್‌) 2030ರ ವೇಳೆಗೆ ಭಾರತದಲ್ಲಿ ₹1.05 ಲಕ್ಷ ಕೋಟಿ ಹೂಡಿಕೆ ಮಾಡುವುದಾಗಿ ಗುರುವಾರ ಹೇಳಿದೆ.

ಭಾರತದಲ್ಲಿ ಕ್ಲೌಡ್‌ ಸೇವೆಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದನ್ನು ಗಮನದಲ್ಲಿ ಇಟ್ಟುಕೊಂಡು ಈ ಹೂಡಿಕೆ ಮಾಡುತ್ತಿರುವುದಾಗಿ ಅದು ತಿಳಿಸಿದೆ.

2016 ರಿಂದ 2022ರ ಅವಧಿಯಲ್ಲಿ ₹ 30,900 ಕೋಟಿ ಹೂಡಿಕೆ ಮಾಡಲಾಗಿದೆ. ಹೀಗಾಗಿ 2030ರ ವೇಳೆಗೆ ಒಟ್ಟಾರೆ ಹೂಡಿಕೆಯು ₹1.36 ಲಕ್ಷ ಕೋಟಿಯಷ್ಟು ಆಗಲಿದೆ ಎಂದು ಹೇಳಿದೆ.

ಡೇಟಾ ಸೆಂಟರ್‌ ಮೂಲಸೌಕರ್ಯಕ್ಕಾಗಿ ಹೂಡಿಕೆ ಮಾಡುವುದರಿಂದ ಭಾರತದ ಉದ್ಯಮಗಳಲ್ಲಿ ಪ್ರತಿ ವರ್ಷವೂ ಸರಾಸರಿ 1.31 ಲಕ್ಷ ಉದ್ಯೋಗ ಸೃಷ್ಟಿಯಾಗುವ ಅಂದಾಜು ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ನಿರ್ಮಾಣ, ಘಟಕ ನಿರ್ವಹಣೆ, ಎಂಜಿನಿರಿಂಗ್‌, ಟೆಲಿಕಮ್ಯುನಿಕೇಷನ್ಸ್‌ ಮತ್ತು ಇತರೆ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ‘ಡಿಜಿಟಲ್‌ ಇಂಡಿಯಾ’ ಉಪಕ್ರಮದಿಂದಾಗಿ ಭಾರತದಲ್ಲಿ ಕ್ಲೌಡ್‌ ಮತ್ತು ಡೇಟಾ ಸೆಂಟರ್‌ಗಳ ವಿಸ್ತರಣೆ ಸಾಧ್ಯವಾಗುತ್ತಿದೆ ಎಂದು ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT