ಬಾಗಲಕೋಟೆ: ಬೆಲೆ ಏರಿಕೆಯಾದರೆ, ವ್ಯಾಪಾರಸ್ಥರು ತತಕ್ಷಣದಿಂದಲೇ ಜಾರಿ ಮಾಡುತ್ತಾರೆ. ಬೆಲೆ ಇಳಿಕೆಯಾದರೆ ಆದೇಶ ಬಂದಿಲ್ಲ, ಹಳೆಯ ಸ್ಟಾಕ್ ಇದೆ ಎಂದು ನಾಲ್ಕಾರು ದಿನ ಸಬೂಬು ಹೇಳಿ ಹೆಚ್ಚಿನ ಲಾಭ ಗಳಿಸಲು ಬೆಲೆ ಇಳಿಕೆ ಲಾಭ ರೈತರಿಗೆ ಸಿಗಲು ಬಿಡುವುದಿಲ್ಲ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಲಾಗುತ್ತದೆ ಎಂಬ ಚರ್ಚೆ ಆರಂಭವಾಗುತ್ತಲೇ ಗುರುವಾರ ಮಧ್ಯಾಹ್ನದಿಂದಲೇ ಹಲವಾರು ಪೆಟ್ರೋಲ್ ಬಂಕ್ ಮಾಲೀಕರು ಬಂಕ್ಗಳ ಮುಂದೆ ನೋ ಸ್ಟಾಕ್ ಬೋರ್ಡ್ ಹಾಕಿದ್ದರು. ಶುಕ್ರವಾರ ಬೆಳಿಗ್ಗೆ ಬೆಲೆ ಏರಿಕೆ ಮಾಡುತ್ತಿದ್ದಂತೆಯೇ ಅದೇ ಪೆಟ್ರೋಲ್ ಬಂಕ್ಗಳಲ್ಲಿ ಮಾರಾಟ ಆರಂಭಿಸಿದರು.

ಕಡಿಮೆ ದರದಲ್ಲಿ ಖರೀದಿಸಿದ್ದ ಪೆಟ್ರೋಲ್ ಹಾಗೂ ಡೀಸೆಲ್ ಅನ್ನು ಉಳಿಸಿಕೊಳ್ಳುವ ಮೂಲಕ ಮರು ದಿನ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರು. ಕಡಿಮೆ ಬೆಲೆಗೆ ಖರೀದಿಸಿದ್ದರೂ ಅದೇ ಬೆಲೆಗೆ ನೀಡಲಿಲ್ಲ.

ಅದೇ ರೀತಿ ರಾಜ್ಯ ಸರ್ಕಾರ ಅಲ್ಕೋಹಾಲ್ ಪ್ರಮಾಣ ಆಧರಿಸಿ ಸುಂಕ ವಿಧಿಸುವ ನೀತಿ ಜಾರಿಗೆ ತಂದಿದೆ. ಇದರಿಂದ ಕೆಲವು ಮದ್ಯಗಳ ಬೆಲೆ ಏರಿಕೆಯಾಗಿದ್ದರೆ, ಕೆಲವು ಮದ್ಯ ಗಳ ಬೆಲೆ ಇಳಿಕೆಯಾಗಿದೆ. ಬಾರ್ ಮಾಲೀಕರು ಬೆಲೆ ಹೆಚ್ಚಿದ ಮದ್ಯಗಳ ಬೆಲೆ ಏರಿಸಿ ಐದು ದಿನಗಳಿಂದಲೇ ಮಾರಾಟ ಮಾಡ ಲಾಗುತ್ತಿದೆ. ಆದರೆ, ಇಳಿಕೆಯಾಗಿರುವ ಮದ್ಯವನ್ನು ಹಿಂದಿನ ಬೆಲೆಗೇ ಮಾರಾಟ ಮಾಡಲಾಗುತ್ತಿದೆ. ಬೆಲೆ ಏರಿಕೆ ಆಗಿರುವ ಮದ್ಯವನ್ನು ಹೆಚ್ಚಿಗೆ ಆಗಿರುವ ಬೆಲೆಗೆ ಮಾರಾಟ ಮಾಡುತ್ತಿರುವ ಮದ್ಯದಂಗಡಿಯವರು ಬಿಯರ್ ಮಾತ್ರ ಹಳೆ ಬೆಲೆಗೇ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಹೊಸ ದಾಸ್ತಾನು ಇನ್ನೂ ಬಂದಿಲ್ಲ ಎಂದು ಜಾರಿಕೊಳ್ಳುತ್ತಾರೆ.

ನೂತನ ನೀತಿಯನ್ವಯ ವೆಲ್ಲಿಂಗ ಟನ್, ಹೈವರ್ಡ್ಸ್, ವಿಸ್ಕಿ ಮುಂತಾದ ಮದ್ಯಗಳ ಬೆಲೆ ಹೆಚ್ಚಾಗಿದೆ. ಹೊಸ ದರದಲ್ಲಿಯೇ ಮಾರಾಟ ಮಾಡ ಲಾಗುತ್ತಿದೆ. ವಿವಿಧ ಬಿಯರ್ಗಳ ಬೆಲೆ ಇಳಿಕೆಯಾಗಿದ್ದು, ಅವುಗಳನ್ನು ಹಳೆಯ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ.

‘ಬೆಲೆ ಇಳಿಕೆಯ ಬಗ್ಗೆ ಕೇಳಿದರೆ, ಇನ್ನೂ ಹೊಸ ದಾಸ್ತಾನು ಬಂದಿಲ್ಲ ಎನ್ನುತ್ತಾರೆ. ಆದರೆ, ಬೆಲೆ ಹೆಚ್ಚಳವನ್ನು ಮಾತ್ರ ಅಂದಿನಿಂದಲೇ ಮಾಡಿದ್ದಾರೆ. ಅದೂ ಕಡಿಮೆ ಬೆಲೆ ಖರೀದಿಸಿದ ಮಧ್ಯ ಉಳಿದಿರಲಿಲ್ಲವೇ? ಕೇಳಲು ಹೋದರೆ ಕುಡುಕರು ಎಂದು ಎಲ್ಲರೂ ನಿರ್ಲಕ್ಷಿಸಿ ಬಿಡುತ್ತಾರೆ’ ಎಂದು ವ್ಯಕ್ತಿಯೊಬ್ಬರು ದೂರಿದರು.

ಬೆಲೆ ಹೆಚ್ಚಳ, ಕಡಿಮೆಯಾದಾಗ ಅಧಿಕಾರಿಗಳು ಖುದ್ದಾಗಿ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿಬೇಕು. ಆದರೆ, ಹಾಗೆ ಮಾಡದ್ದರಿಂದ ಅಂಗಡಿಯವರು ನಿಗದಿ ಪಡಿಸಿದ್ದೇ ಬೆಲೆ ಎನ್ನುವಂತಾಗಿದೆ ಎಂದು ಆರೋಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-19-753332837

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.